ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗದ ಸದಸ್ಯರು ಬಂಟ್ವಾಳ ತಾಲೂಕಿನ ಕಾಡಬೆಟ್ಟು ಅಂತರಂಗಡಿಯಿಂದ ಕಾಡಬೆಟ್ಟು ಕೊಡಮಂತಾಯ ಪಂಜುರ್ಲಿ ದೈವ ಸ್ಥಾನ ವರೆಗೆ ರಸ್ತೆ ಬದಿ ಬೆಲೆದ ಬಲ್ಲೆ, ಹುಲ್ಲು, ಗಿಡ ಗಂಟೆಗಳನ್ನು ಕಡಿದು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಮಾಡಿದರು.
ಈ ಶ್ರಮದಾನ ಕಾರ್ಯಕ್ರಮಕ್ಕೆಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀಧರ ಪೈ, ನೀಲಪ್ಪ ಪೂಜಾರಿ,ಶ್ರಮದಾನದ ಸಂದರ್ಭ ಭಾಗವಹಿಸಿ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹಿಸಿದರು.
ಶ್ರಮಧಾನ ಕಾರ್ಯದಲ್ಲಿ ಶೌರ್ಯ ಘಟಕ ಕಾಡಬೆಟ್ಟು ವಗ್ಗದ ಸಂಯೋಜಕಿ ರೇಖಾ.ಪಿ,ಘಟಕ ಪ್ರತಿನಿಧಿ ಪ್ರವೀಣ್, ಸದಸ್ಯರುಗಳಾದ
ಸಂಪತ್ ಶೆಟ್ಟಿ,ಮಹಾಬಲ ರೈ,
ನಾರಾಯಣ್ ಶೆಟ್ಟಿ, ಲಕ್ಷ್ಮಣ್,, ಭಾಗವಹಿಸಿದ್ದರು.