ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಶ್ರಮದಾನ ಸೇವೆ

Share with

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಬಂಟ್ವಾಳ ತಾಲೂಕಿನ
ಕಾಡಬೆಟ್ಟು ದ್ವಾರದಿಂದ ವಗ್ಗ ಜಂಕ್ಷನ್ ವರೆಗೆ ರಸ್ತೆಯ ಅಕ್ಕಾ ಪಕ್ಕ ಬೆಳೆದ ಹುಲ್ಲು ಗಿಡಗಂಟಿಗಳನ್ನು ಕಡಿದು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಮಾಡಿದರು.
ಈ ಶ್ರಮದಾನ ಕಾರ್ಯಕ್ರಮಕ್ಕೆ   ಬಂಟ್ವಾಳ ತಾಲೂಕು ಶೌರ್ಯ ವೀಪತು ನಿರ್ವಹಣಾ ಘಟಕದ ಕ್ಯಾಪ್ಟನ್ ಪ್ರಕಾಶ್ ಭೇಟಿ ನೀಡಿ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹಿಸಿದರು.

ಶ್ರಮದಾನ ಕಾರ್ಯಕ್ರಮದಲ್ಲಿ ಕಾಡಬೆಟ್ಟು ವಗ್ಗ  ಶೌರ್ಯ ಘಟಕ ಸಂಯೋಜಕಿ ರೇಖಾ. ಪಿ. ಘಟಕ ಪ್ರತಿನಿಧಿ ಪ್ರವೀಣ್ , ಸದಸ್ಯರಾದ ಸಂಪತ್ ಶೆಟ್ಟಿ, ಮಹಾಬಲ ರೈ, ಅಶೋಕ ಬೊಲ್ಮರ್, ರೋಹಿತ್, ಜನಾರ್ದನ, ಅಶೋಕ್, ಪವಿತ್ರ, ನಾರಾಯಣ ಶೆಟ್ಟಿ, ವಿನೋದ, ಶಶಿಕಲಾ, ಆನಂದ, ಪ್ರಮೀಳ, ರಮೇಶ್, ಮೊದಲಾದವರು ಭಾಗವಹಿಸಿದ್ದರು.


Share with

Leave a Reply

Your email address will not be published. Required fields are marked *