ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣ ಘಟಕ ಕಲ್ಲಡ್ಕ ಇದರ ವತಿಯಿಂದ ಶ್ರಮದಾನ ಸೇವಾ ಕಾರ್ಯಕ್ರಮ ದಿನಾಂಕ 1-12-2024 ರಂದು ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಲ್ಲಡ್ಕ ಕುದ್ರೆಬೆಟ್ಟು ಕಲ್ಲುರ್ಟಿ ದೈವಸ್ಥಾನ ವಠಾರ ದಲ್ಲಿ ಜರಗಿತು.
ಕುದ್ರೆಬೆಟ್ಟು ಕಲ್ಲುರ್ಟಿ ದೈವಸ್ಥಾನದ ತಿಂಗಳ ಅಗೇಲು ಸೇವಾ ವ್ಯವಸ್ಥೆಯ ಕೊಠಡಿಗೆ ಪ್ರಕೃತಿ ವಿಕೋಪ ದಿಂದಾಗಿ ಸಮೀಪದ ಬರೇ ಜರಿದು ಬಿದ್ದು ಕೊಠಡಿಗೆ ಕೆಸರು ಮಣ್ಣು ತುಂಬಿತ್ತು, ಇದನ್ನು ತೆರವು ಮಾಡಲು ದೈವಸ್ಥಾನ ಸಮಿತಿ ಕಲ್ಲಡ್ಕ ಶೌರ್ಯ ವಿಪತ್ತು ಘಟಕಕ್ಕೆನೀಡಿದ ಮನವಿಗೆ ಸ್ಪಂದಿಸಿ ಘಟಕದ ಸದಸ್ಯರು ಮಣ್ಣು ತೆರವ್ ಹಾಗೂ ದೈವಸ್ಥಾನದ ಪರಿಸರ ಸ್ವಚ್ಛ ಕಾರ್ಯ ಮಾಡಿದರು.
ಸ್ವಚ್ಛತಾ ಕಾರ್ಯಕ್ರಮದ ಸಂರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಯೋಜನೆಯ ವಿಟ್ಲ ತಾಲೂಕು ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಸುರೇಶ್ ಪೆರ್ನೆ, ಮಾಸ್ಟರ್ ದೀಪಕ್ ಅಳಿಕೆ, ಜನಸಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಿನ್ನಪ್ಪ ಎಳ್ತಿಮಾರ, ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಧರ್ಮದ ಬಳ್ಳಿ , ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುಂದರ ಸಾಲಿಯಾನ್,ಮೊದಲದವರು ಭೇಟಿ ನೀಡಿ ಪ್ರೊಸ್ತಾಹಿಸಿದರು.
ಶ್ರಮದಾನ ಸೇವಾ ಕಾರ್ಯದಲ್ಲಿ ಕಲ್ಲಡ್ಕ ಶೌರ್ಯ ಘಟಕ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರಬೆಟ್ಟು, ಘಟಕದ ಸಂಯೋಜಕಿ ವಿದ್ಯಾ ಸದಸ್ಯರುಗಳಾದ ತುಳಸಿ, ಸೌಮ್ಯ, ರಮೇಶ್ ಕುದ್ರೆಬೆಟ್ಟು,ಮೌರೀಶ್,ಧನಂಜಯ, ಸಂತೋಷ್ ಬೊಲ್ಪೊಡಿ , ಚಿನ್ನಾ ಕಲ್ಲಡ್ಕ, ಮೊದಲಾದವರು ಭಾಗವಹಿಸಿದ್ದರು.