ಬಂಟ್ವಾಳ: ಶ್ರೀ ದುರ್ಗಾ ಮಹಮ್ಮಾಯಿ ದೇವಸ್ಥಾನದಲ್ಲಿ 19ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ

Share with

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಸಿದ್ಧಕಟ್ಟೆ ವಲಯ ಶ್ರೀ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ 19ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಕೋರಿಯಾರು ಶ್ರೀ ದುರ್ಗಾ ಮಹಮ್ಮಾಯಿ ದೇವಸ್ಥಾನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಶ್ರೀಯುತ ಮಾಧವ ಗೌಡ ಯೋಜನಾಧಿಕಾರಿಗಳು ಯೋಜನೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಶ್ರೀಯುತ ಮಾಧವ ಗೌಡ ಯೋಜನಾಧಿಕಾರಿಗಳು ಯೋಜನೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಧಾರ್ಮಿಕ ಉಪನ್ಯಾಸವನ್ನು ನೀಡಿದ ಶ್ರೀ ಮುನಿರಾಜ ರೆಂಜಾಳರವರು “ಮಾನವ ಧರ್ಮವನ್ನು ಪಾಲಿಸಿ, ನಿನಗೆ ನೀನು ಏನನ್ನು ಮಾಡಬಾರದೆಂದು ಬಯಸಿದರೆ ನೀನು ಅದನ್ನು ಯಾರಿಗೂ ಮಾಡಬೇಡ” ಎಂಬ ನುಡಿಮಾತನ್ನು ಹೇಳಿದರು.

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಸಭೆ

ಪೂಜ್ಯರ ಸಂದೇಶವನ್ನು ಮೇಲ್ವಿಚಾರಕರಾದ ಶಿವರಂಜನ್.ಕೆ ರವರು ಪ್ರಸ್ತಾಪಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಗೋಪಾಲ್ ಗೌಡ ಕೊರಿಯಾರು, ಶ್ರೀಯುತ ಸುರೇಶಅಂಚನ್, ಸದಾನಂದ ಶೀತಲ್ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಭಕ್ತಾದಿಗಳು, ಸೇವಾ ಪ್ರತಿನಿಧಿಗಳು ಹಾಗೂ ವಿಎಲ್ಇ ಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಸುಧಾಕರ್ ಶೆಟ್ಟಿ ನಿರ್ವಹಿಸಿದರು. ಕೊನೆಯ ಅಂಗವಾಗಿ ಕಾರ್ಯಕ್ರಮದ ಧನ್ಯವಾದವನ್ನು ಸುರೇಶ್ ಅಂಚನ್ ರವರು ನೆರವೇರಿಸಿದರು.


Share with

Leave a Reply

Your email address will not be published. Required fields are marked *