ಕಾಸರಗೋಡು: ಚೇನಕ್ಕೋಡು ಶ್ರೀ ಪಲ್ಲಂಗಳ ತರವಾಡಿನಲ್ಲಿ ಚಾಮುಂಡಿ ದೈವದ ಧರ್ಮನೇಮೋತ್ಸವ ಜ.12 ಮತ್ತು 13ರಂದು ನಡೆಯಲಿದೆ.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ತರವಾಡಿನಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ಪುರುಷ ಮಧೂರು, ಕಾರ್ಯದರ್ಶಿ ಮನುರಾಜ್ ಉಪ್ಪಳ ಹಾಗೂ ಸಮಿತಿ ಸದಸ್ಯರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.