ಪೆರ್ಲ: ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ , ಮರಾಟಿ ಚಾರಿಟೇಬಲ್ ಟ್ರಸ್ಟ್ , ಮರಾಟಿ ಮಹಿಳಾ ವೇದಿಕೆ  ಸಹಯೋಗದಲ್ಲಿ ಮರಾಟಿ ಡೇ ಆಚರಣೆ

Share with

ಕೇರಳ ಮರಾಟಿ ದಿನ 2024 ರಂದು ಪೆರ್ಲ ಮರಾಟಿ ಬೋರ್ಡಿಂಗ್ ಹಾಲ್ ನಲ್ಲಿ ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಪೆರ್ಲ, ಮರಾಟಿ ಚಾರಿಟೇಬಲ್ ಟ್ರಸ್ಟ್ ಪೆರ್ಲ, ಮರಾಟಿ ಮಹಿಳಾ ವೇದಿಕೆ ಪೆರ್ಲ ಸಹಯೋಗದಲ್ಲಿ ಮರಾಟಿ ಡೇ ಆಚರಿಸಲಾಯಿತು. ಡಾ. ಬಿ. ನಾರಾಯಣ ನಾಯ್ಕ್ ಸ್ಥಾಪಕ ಕಾರ್ಯದರ್ಶಿ ಮರಾಟಿ ಸಂರಕ್ಷಣಾ ಸಮಿತಿ, ಮ್ಯಾನೇಜಿಂಗ್ ಟ್ರಸ್ಟಿ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಮರಾಟಿ ಡೇ ಪತಾಕೆ ಹಾರಿಸಿ ಮರಾಟಿ ಡೇಗೆ ಚಾಲನೆ ಇತ್ತರು. ನಂತರ ಮಾತನಾಡಿ ಮರಾಟಿ ಮರುಮೀಸಲಾತಿಗಾಗಿ 2001 ರಿಂದ ನಡೆದ ಹೋರಾಟದ ಸಂಕ್ಷಿಪ್ತ ವಿವರಣೆಯನು ಇತರು
ಶ್ರೀ ಬಾಲಕೃಷ್ಣ ಮಾಸ್ಟರ್ ಕಯ್ಯರ್, ಡಾ ಬಿ ಜಿ ನಾಯ್ಕ್ ಹಾಗೂ ಡಾ ಬಿ ನಾರಾಯಣ ನಾಯ್ಕ್ ರವರು ಸಮಾಜ ಬಾಂದವರನ್ನು ಒಗ್ಗೂಡಿಸಿ ಸತತವಾಗಿ 13 ವರ್ಷಗಳ ಹೋರಾಟದ ಫಲವಾಗಿ ಸಿಕ್ಕಿದ ಮರು ಮೀಸಲಾತಿಯನ್ನು ಸರಿಯಾಗಿ ಉಪಯೋಗಿಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಶ್ರಮವಹಿಸಬೇಕೆಂದು ಕರೆ ಕೊಟ್ಟರು. ಡಾ. ಬಿ ಜಿ ನಾಯ್ಕ್ ಅಧ್ಯಕ್ಷತೆ ವಹಿಸಿದರು, ಡಾ ಶಿವ ನಾಯ್ಕ್, ಸಿ ಎಚ್ ಗೋವಿಂದ ನಾಯ್ಕ್, ಶ್ರೀಮತಿ ವಾರಿಜ ಮಹಿಳಾ ವೇದಿಕೆ ಅಧ್ಯಕ್ಷರು,ಶ್ರೀಮತಿ ಶಶಿಕಲಾ, ಶ್ರೀಮತಿ ಪೂರ್ಣಿಮಾ ಪುರಂದರ, ಪುರಂದರ ಮಾಸ್ಟರ್ ಪೆರ್ಲ, ಕೃಷ್ಣ ನಾಯ್ಕ್ ಕೂಡ್ಲು, ಶೀನ ನಾಯ್ಕ್, ಐತಪ್ಪ ನಾಯ್ಕ್, ಬಾಲಕೃಷ್ಣ ನಾಯ್ಕ್ ನಲ್ಕ, ಭವಾನಿ ಎಲ್ಕನಾ, ನಾರಾಯಣ ನಾಯ್ಕ್ ಕಯ್ಯರ್ ಮೊದಲಾದ ನೇತಾರರು ಭಾಗವಹಿಸಿದರು. ಡಾ. ಬಿ ಜಿ ನಾಯ್ಕ್ ರವರು ಮರಾಟಿ ಸಮಾಜದ ಏಳಿಗೆಗಾಗಿ ನಡೆಸಿದ ಹೋರಾಟವನ್ನು ಗುರುತಿಸಿ ಈ ಸಂದರ್ಭದಲ್ಲಿ ಶಾಲು ಹೊದಿಸಿ, ಹಣ್ಣು ಹಂಪಳನ್ನು ಇತು ಸನ್ಮಾನಿಸಲಾಯಿತು


Share with

Leave a Reply

Your email address will not be published. Required fields are marked *