ಸಿದ್ಧರಾಮಯ್ಯಗೆ ಹಣ ನೀಡಿ ಜೈಕಾರ ಹಾಕಿಸಿಕೊಳ್ಳುವ ಸ್ಥಿತಿ: ಬಿ. ವೈ ವಿಜಯೇಂದ್ರ

Share with

ಗಂಗಾವತಿ: ‘ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಸಿ.ಎಂ ಭಾಷಣ ಮಾಡುವಾಗ ಬಹುತೇಕ ಕುರ್ಚಿಗಳು ಖಾಲಿ ಇದ್ದವು. ಕಾರ್ಯಕರ್ತರಿಗೆ ಹಣ ಕೊಟ್ಟು ಜೈಕಾರ ಹಾಕಿಸಿಕೊಳ್ಳಬೇಕಾದ ದುಃಸ್ಥಿತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ತಾಲ್ಲೂಕಿನ ಮರಳಿ ಸಮೀಪದಲ್ಲಿ ಭಾನುವಾರ ನಡೆದ ಪಕ್ಷದ ಅವಲೋಕನಾ ಸಭೆ ವೇಳೆ ಮಾತನಾಡಿ, ‘ರಾಜ್ಯ ರಾಜಕಾರಣದಲ್ಲಿ ನವೆಂಬರ್ ಅಥವಾ ಅದಕ್ಕೂ ಮೊದಲು ಕ್ರಾಂತಿಯಾಗುವುದು ಖಚಿತವಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಈ ಕುರಿತು ಸುಳಿವು ನೀಡಿದ್ದಾರೆ’ ಎಂದರು.

ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರುವಂತೆ ವಿರೋಧ ಪಕ್ಷಗಳಿಗೆ ಮುಖ್ಯಮಂತ್ರಿ ಸವಾಲು ಹಾಕಿದ್ದಾರೆ. ಮೊದಲು ಪಕ್ಷದ ಶಾಸಕರನ್ನು ಕರೆದು ಅವರ ಪ್ರಶ್ನೆಗಳಿಗೆ ಸಿ.ಎಂ ಉತ್ತರಿಸಲಿ. ನಂತರ ಸವಾಲು ಹಾಕಲಿ’ ಎಂದು ತಿರುಗೇಟು ನೀಡಿದರು.


Share with

Leave a Reply

Your email address will not be published. Required fields are marked *