ಕರ್ನಾಟಕದಲ್ಲಿ CM ಸಿದ್ದರಾಮಯ್ಯ ಸಂಪುಟದ ಸಚಿವರ ರಾಜೀನಾಮೆ ಪಡೆದ ವಿಚಾರ ಸದ್ದುಮಾಡುತ್ತಿರುವ ಈ ಹೊತ್ತಲ್ಲೇ, ತಮಿಳುನಾಡಿನ ಸ್ಟಾಲಿನ್ ಸರ್ಕಾರದಲ್ಲೂ ರಾಜೀನಾಮೆ ಪರ್ವ ಮುಂದುವರೆದಿದೆ.

₹150 ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ಮೇಯರ್ ಇಂದ್ರಾಣಿ ಪತಿ ಪೊನ್ ವಸಂತ್ ಅವರನ್ನು ಬಂಧಿಸಲಾಗಿತ್ತು. ಸಿಎಂ ಸ್ಟಾಲಿನ್ ಅವರ ಆದೇಶದ ಮೇರೆಗೆ 5 ವಲಯ ಅಧ್ಯಕ್ಷರು, 2 ಸ್ಥಾಯಿ ಸಮಿತಿ ಅಧ್ಯಕ್ಷರು ರಾಜೀನಾಮೆ ನೀಡಿದ್ದು, ಇದೀಗ ಇಂದ್ರಾಣಿ (ಡಿಎಂಕೆ) ಕೂಡ ರಾಜೀನಾಮೆ ನೀಡಲಿದ್ದಾರೆ.




