ಉಪ್ಪಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಂಗಲ್ಪಾಡಿ ಚೆರುಗೋಳಿ ಹಿಂದೂ ರುದ್ರಭೂಮಿಗೆ ಒದಗಿಸಿದ ಸಿಲಿಕಾನ್ ಚೇಂಬರ್‌ನ್ನು ಲೋಕಾರ್ಪಾಣೆ ಮಾಡಲಾಯಿತು.
ಯೋಜನೆಯ ಪದಾಧಿಕಾರಿಗಳಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗೋಪಾಲ ಶೆಟ್ಟಿ ಅರಿಬೈಲು, ಅಶ್ವಥ್ ಲಾಲ್‌ಭಾಗ್, ದಿನೇಶ್ ಚೆರುಗೋಳಿ, ಯೋಜನಾಧಿಕಾರಿ ಶಶಿಕಲಾ ಸುವರ್ಣ ಹಾಗೂ ಗ್ರಾಮಸ್ಥರು ಭಾಗವಹಿಸಿದರು. ಮಂಜೂರಾತಿ ಪತ್ರವನ್ನು ಯೋಜನಾಧಿಕಾರಿಗಳು ಸ್ಮಶಾನದ ಅಭಿವೃದ್ದಿ ಸಮಿತಿ ಅಧ್ಯಕ್ಷ ರಘು ಚೆರುಗೋಳಿ ಇವರಿಗೆ ಹಸ್ತಾಂತರಿಸಿದರು.