ಉಪ್ಪಳ :ಬೀಟಾ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ತುಕಾರಾಮ ಬಾಯಾರು ನಿರ್ದೇಶನದಲ್ಲಿ, ಶರತ್ ಚಂದ್ರ ಬಾಯಾರು ನಿರ್ಮಾಣದಲ್ಲಿ ಕಾಸರಗೋಡು, ಮಂಗಳೂರು. ಉಡುಪಿ ಮೊದಲಾದ ಕಡೆಗಳಲ್ಲಿ ಚಿತ್ರೀಕರಣಗೊಂಡ ಬಹು ನಿರೀಕ್ಷೆಯ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕನ್ನಡ ಕಿರುಚಿತ್ರ,”ಸಿಲಿಕಾನ್ ಸಿಟಿ” 2025ರ ಜನವರಿ ತಿಂಗಳ ಹೊಸವರ್ಷದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಗಿರೀಶ್ ಸಾಲ್ಯಾನ್ ಮುಳಿಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಕಿರಣ್ ಆಚಾರ್ಯ ಪುತ್ತಿಗೆ ಸಹಾಯಕ ನಿರ್ದೇಶಕರಾಗಿದ್ದಾರೆ. ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಕಾರ್ಯಮಗ್ನವಾಗಿದೆ.