ಉಪ್ಪಳ: ಕನ್ಯಾನ ಪರಿಸರ ಪ್ರದೇಶದಲ್ಲಿ ಸಿಲಿಕಾನ್ ಸಿಟಿ ಎಂಬ ಕಿರುಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಕುಡುಕರು ಬಿದ್ದು ನರಳಾಡುವುದನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಪರಿಸರದ ಜನರು ಸ್ವಲ್ಪ ಗೊಂದಲಕ್ಕೀಡಾದ ಘಟನೆ ನಡೆದಿದೆ.
ಅದ್ದೂರಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರ ಇದಾಗಿದೆ. ತುಕಾರಾಮ ಬಾಯಾರು ಇವರು ಚಿತ್ರದ ನಿರ್ದೇಶನ ಹಾಗೂ ಶರತ್‌ಚಂದ್ರ ಬಾಯಾರು, ಗಿರೀಶ್ ಸಾಲ್ಯಾನ್ ಮುಳಿಯ ಮತ್ತು ಬೀಟಾ ಪ್ರೊಡಕ್ಷನ್ ಇವರ ನಿರ್ಮಾಣದಲ್ಲಿ ಮೂಡಿಬರಲಿದೆ.
ಛಾಯಾಗ್ರಹಣ ಮೋಹಿತ್ ಸದಾಶಿವ, ಸಂಗೀತ ಗುರು ಬಾಯಾರು, ಸಂಕಲನ ಮನೀಶ್ ಕಾಸರಗೋಡು, ಕಾರ್ಯಕಾರಿ ನಿರ್ಮಾಪಕ ಕಿರಣ್ ಆಚಾರ್ಯ ಪುತ್ತಿಗೆ ನಿರ್ವಹಿಸಿದ್ದಾರೆ. ಈ ಚಿತ್ರದ ಟ್ರೇಲರ್ ಈ ತಿಂಗಳ 20ರಂದು ಬಿಡುಗಡೆಯಾಗಲಿದೆ.