ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ. ಭಾರೀ ಪೈಪೋಟಿಯಿಂದ ಕೂಡಿದ್ದ ಫೈನಲ್ನಲ್ಲಿ ಚೋಪ್ರಾ 89.45 ಮೀ. ದೂರ ಎಸೆದರು. 6 ಸುತ್ತುಗಳಲ್ಲಿ 5 ಬಾರಿ ಅವರು ಫೌಲ್ ಆಗಿದ್ದೇ ದೊಡ್ಡ ಹಿನ್ನಡೆಯಾಯಿತು.
ಆದರೆ, ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀ. ದೂರ ಎಸೆದು ಒಲಿಂಪಿಕ್ ದಾಖಲೆ ಸೃಷ್ಟಿಸಿದರಲ್ಲದೆ, ಚಿನ್ನದ ಪದಕ ಗೆದ್ದರು. ಗ್ರೆನೆಡಾದ ಆಂಡರ್ಸನ್ ಪೀಟರ್ಸ್ 88.54 ಮೀ. ಎಸೆದು ಕಂಚಿನ ಪದಕ ಗೆದ್ದರು.