ಕರ್ನಾಟಕದಲ್ಲೂ SIR ಜಾರಿ ಮಾಡಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ‘ನಮ್ಮ ದೇಶದಲ್ಲಿ ಬಾಂಗ್ಲಾ ವಲಸಿಗರು, ರೊಹಿಂಗ್ಯಾಗಳು ಬಹಳ ಜನರಿದ್ದಾರೆ. ಅವರನ್ನೆಲ್ಲ ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಇವರ ಜೊತೆಗೆ ಇವರಿಗೆ ಬೆಂಬಲ ನೀಡುವವರನ್ನೂ ದೇಶ ಬಿಟ್ಟು ಹೊರಹಾಕಬೇಕು.

ನಮ್ಮ ಕರ್ನಾಟಕದಲ್ಲೂ ಇಂಥವರು ಅನೇಕರಿದ್ದಾರೆ, ವಲಸೆ ಬಂದು ಅವರು ಇಲ್ಲಿ ಮತದಾರರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲೂ SIR ಜಾರಿ ಆಗಬೇಕು’ ಎಂದು ಆಗ್ರಹಿಸಿದ್ದಾರೆ.




