ಮಂಗಳೂರು: ಮಂಗಳೂರು ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯ ಮನೆಯಲ್ಲಿ ಅಕ್ಕ ಹಾಗೂ ತಂಗಿ ಇಬ್ಬರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸುಂದರಿ ಶೆಟ್ಟಿ (80) ಮತ್ತು ಅವರ ತಂಗಿ ಲತಾ ಭಂಡಾರಿ (70) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ನಗರದ ಬಾರ್ ಒಂದರಲ್ಲಿ ಕೆಲಸಕ್ಕಿರುವ ಜಗನ್ನಾಥ್ ಭಂಡಾರಿ ಅವರು ಪತ್ನಿ ಲತಾ ಭಂಡಾರಿ ಹಾಗೂ ಪತ್ನಿಯ ಅಕ್ಕ ಸುಂದರಿ ಶೆಟ್ಟಿ ಅವರೊಂದಿಗೆ ವಾಸವಾಗಿದ್ದರು. ಜಗನ್ನಾಥ ಅವರು ಎಂದಿನಂತೆ ಬೆಳಿಗ್ಗೆ ಬಾರಿಗೆ ಕೆಲಸಕ್ಕೆ ಹೋಗಿದ್ದು, ಸಂಜೆ ಅವರು ಮನೆಗೆ ಮರಳಿದಾಗ ಒಳಗಡೆಯಿಂದ ಬಾಗಿಲಿನ ಚಿಲಕ ಹಾಕಿತ್ತು. ಕಿಟಕಿಯಿಂದ ನೋಡಿದಾಗ ಸೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತ್ತು ಎಂದು ವರದಿಯಾಗಿದೆ.
ಈ ಬಗ್ಗೆ ಜಗನ್ನಾಥ ಭಂಡಾರಿ ಅವರು ದೂರು ನೀಡಿದ್ದು, ಕದ್ರಿಯ ನಗರ ಪೂರ್ವ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.