
ಕುಂಬಳೆ: ಸಾರ್ವಜನಿಕ ಶ್ರೀ
ಗಣೇಶೋತ್ಸವ ಸಮಿತಿಯ ಸೀತಂಗೋಳಿ ಇದರ ಆಶ್ರಯದಲ್ಲಿ ನಡೆಯುವ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀದೇವಿ ಭಜನಾ ಮಂದಿರದಲ್ಲಿ ನಡೆಯಿತು.
ಸಮಿತಿ ಅಧ್ಯಕ್ಷ ಜನಾರ್ದನ ಕಣ್ಣೂರು ಮಂದಿರ ಅಧ್ಯಕ್ಷ ಜಯಂತ ಪಾಟಾಳಿಯವರಿಗೆ ಆಮಂತ್ರಣ ಪತ್ರಿಕೆ ನೀಡಿ ಬಿಡುಗಡೆಗೊಳಿಸಿದರು.
ಗಣೇಶೋಷವ ಸಮಿತಿ ಗೌರವಾಧ್ಯಕ್ಷ ಸುಕುಮಾರ ಕುದ್ರೆಪಾಡಿ, ಕಾರ್ಯದರ್ಶಿ ಹರೀಶ್ ಸಿದ್ದಬೈಲ್, ಚಿಕ್ಕಪು ರೈ ಅಪ್ಪಣ್ಣ ಎಸ್ ಬಿ ನಾರಾಯಣ ಗೋಪಾಲ ಮುಕಾರಿ, ಉದಯ ಮುಖರೀಕಂಡ ಶಂಕರ ಪಟ್ಟಲಿ ಮತ್ತು ಸಮಿತಿ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡರು.