
ಆಹಾರದಲ್ಲಿ ಸಾಮಾನ್ಯವಾಗಿ ಬಳಸುವ ಕೊತ್ತಂಬರಿ ಸೊಪ್ಪಿನಿಂದ ಮೂತ್ರಪಿಂಡದ ಅನೇಕ ಸಮಸ್ಯೆ ನಿವಾರಣೆಯಾಗುತ್ತವೆ. ಊಟದಲ್ಲಿ ಪರಿಮಳ ನೀಡುವ ಇದರಿಂದ ಕಿಡ್ನಿ ಶುದ್ದೀಕರಣ ಹಾಗೂ ಅದರ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಇದು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವ, ರಕ್ತದೊತ್ತಡ ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಮೂತ್ರಪಿಂಡದ ಹಾನಿಗೆ ಕಾರಣವಾಗುವ ಪಾದರಸದ ಕುರುಹುಗಳನ್ನು ದೇಹದಿಂದ ತೆಗೆಯಲು ಕೊತ್ತಂಬರಿ ಸೊಪ್ಪು ಸಹಕಾರಿ. ಈ ಸೊಪ್ಪಿನಲ್ಲಿ ವಿಟಮಿನ್- A,C,E,K,B-ವಿಟಮಿನ್‌ಗಳು ಇವೆ.




