ಸೋಲಾರ್ ಮ್ಯಾನುಫ್ಯಾಕ್ಚರಿಂಗ್: ಬೇರೆ ದೇಶಗಳಿಗೆ 20 ವರ್ಷ; ಭಾರತಕ್ಕೆ ನಾಲ್ಕೈದು ವರ್ಷ ಸಾಕು: ವಿನೀತ್ ಮಿಟ್ಟಲ್

Share with

ನವದೆಹಲಿ, ನವೆಂಬರ್ 11: ಸೋಲಾರ್ ಉಪಕರಣಗಳ ತಯಾರಿಕೆಯ ವ್ಯವಸ್ಥೆ ನಿರ್ಮಿಸಲು ಬೇರೆ ದೇಶಗಳಿಗೆ 20 ವರ್ಷ ಬೇಕಾದವು. ಆದರೆ, ಭಾರತದಲ್ಲಿ ನಾಲ್ಕೈದು ವರ್ಷದಲ್ಲಿ ಇದು ಸಾಧ್ಯವಾಗಲಿದೆ ಎಂದು ಅವಾಡ ಗ್ರೂಪ್ನ ಸಂಸ್ಥಾಪಕ ಮತ್ತು ಛೇರ್ಮನ್ ಆದ ವಿನೀತ್ ಮಿಟ್ಟಲ್ ಅಭಿಪ್ರಾಯಪಟ್ಟಿದ್ದಾರೆ. ಯುಎಇ ದೇಶದ ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮವೊಮದರಲ್ಲಿ ಮಾತನಾಡುತ್ತಿದ್ದ ವಿನೀತ್, ಬಹಳ ಶೀಘ್ರದಲ್ಲಿ ಭಾರತವು ಸೌರಶಕ್ತಿ ಉತ್ಪಾದನೆಯಲ್ಲಿ ಪೂರ್ಣ ಸ್ವಾವಲಂಬನೆ ಸಾಧಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೌರಶಕ್ತಿ ಉತ್ಪಾದನೆಯ ಉಪಕರಣಗಳಿಗಾಗಿ ಭಾರತೀಯ ಕಂಪನಿಗಳು ಬೇರೆ ದೇಶಗಳ ಮೇಲೆ ಅವಲಂಬಿತವಾಗಿವೆ. ಇದು ಭಾರತೀಯ ಸೌರ ಸಂಸ್ಥೆಗಳಿಗೆ ಹಿನ್ನಡೆಯಂತೂ ತರುತ್ತಿದೆ. ಈ ಪರಿಸ್ಥಿತಿ ಬಹಳ ಬೇಗ ಬದಲಾಗಲಿದೆ. ಸೌರಶಕ್ತಿ ಉತ್ಪಾದನೆಯ ಸಪ್ಲೈ ಚೈನ್ನಲ್ಲಿರುವ ಪ್ರತಿಯೊಂದು ಭಾಗದ ಪೂರ್ಣ ವ್ಯವಸ್ಥೆಯನ್ನು ನಿರ್ಮಿಸಲು ಹಲವು ದೇಶಗಳು ಕಳೆದ 20 ವರ್ಷಗಳಿಂದ ಮಾಡಿದ ಕಾರ್ಯವನ್ನು ಭಾರತ ಮುಂದಿನ ನಾಲ್ಕೈದು ವರ್ಷದಲ್ಲೇ ಸಾಧಿಸಲಿದೆ ಎಂದು ಮಿಟ್ಟಲ್ ಹೇಳಿದ್ದಾರೆ.

ಸೋಲಾರ್ನಲ್ಲಿ ನಾನು ಮೊದಲ ಪ್ರಾಜೆಕ್ಟ್ ಮಾಡಿದಾಗ ಬೆಲೆ 30 ಸೆಂಟ್ನಷ್ಟಿತ್ತು. ಈಗ ನಾವು ಕೇವಲ ನಾಲ್ಕು ಸೆಂಟ್ಗಿಂತ ಕಡಿಮೆ ಬೆಲೆಗೆ ಮಾಡುತ್ತಿದ್ದೇವೆ. ಇದೇ ರೀತಿಯಲ್ಲಿ ಹೈಡ್ರೋಜನ್ ಎನರ್ಜಿ ಸೆಕ್ಟರ್ ಕೂಡ ಅಭಿವೃದ್ದಿಯಾಗಬೇಕು. ಜಾಗತಿಕವಾಗಿ ಸರ್ಕಾರಗಳಿಂದ ಹಲವಾರು ಯೋಜನೆಗಳು ಬರದೇ ಹೋದರೆ ಈ ಸೆಕ್ಟರ್ನಲ್ಲಿ ಇಂಧನ ಉತ್ಪಾದನಾ ವೆಚ್ಚ ಕಡಿಮೆ ಆಗುವುದೇ ಇಲ್ಲ’ ಎಂದು ವಿನೀತ್ ಮಿಟ್ಟಲ್ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *