ರೈಲು ಪ್ರಯಾಣಿಕರ ಸಂಕಷ್ಟ ಪರಿಹರಿಸಿ ,ರೈಲ್ವೆಯ ನಿರ್ಲಕ್ಷೆ ಕೊನೆಗೊಳಿಸಿ

Share with

ಮಂಜೇಶ್ವರ: ಪ್ಯಾಸೆಂಜರ್ ರೈಲುಗಳ ಬೋಗಿಗಳನ್ನು ಹೆಚ್ಚುಗೊಳಿಸಿ, ವಂದೇ ಭಾರತ್ ರೈಲನ್ನು ಮಂಗಳೂರು ತನಕ ವಿಸ್ತರಿಸಿ ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಎ.ಐ.ವೈ.ಎಫ್ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ರೈಲು ನಿಲ್ದಾಣಕ್ಕೆ ಪ್ರತಿಭಟನಾ ಮರ‍್ಚ್ ನಡೆಯಿತು. ಎ.ಐ.ವೈಎಫ್ ಮಂಜೇಶ್ವರ ಮಂಡಲ ಅಧ್ಯಕ್ಷ ಶರತ್ ಬೆಜ್ಜ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕರ‍್ಯರ‍್ಶಿ ಎಂ. ಶ್ರೀಜಿತ್ ಪ್ರತಿಭಟನಾ ಮರ‍್ಚ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಅಜಿತ್ ಎಂ.ಸಿ ಲಾಲ್ ಬಾಗ್, ರಾಜ್ಯ ಸಮಿತಿ ಸದಸ್ಯ ಧನೀಶ್ ಬಿರಿಕುಳಂ, ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಕೆ.ಆರ್, ಸಿಪಿಐ ಮಂಜೇಶ್ವರ ಲೋಕಲ್ ಕರ‍್ಯರ‍್ಶಿ ಶ್ರೀಧರ್ ಮಾಡ, ಎ.ಐ.ವೈ.ಎಫ್ ನೇತಾರೆ ಅಮ್ಮು ಜನರ‍್ಧನನ್ ಮೊದಲಾದವರು ಶುಭಾಶಂಸೆ ಭಾಷಣ ಮಾಡಿದರು. ದಯಾಕರ ಮಾಡ ಸ್ವಾಗತಿಸಿ, ಸುನೀತಾ ವಲ್ಟಿ ಡಿ.ಸೋಜ ವಂದಿಸಿದರು.


Share with

Leave a Reply

Your email address will not be published. Required fields are marked *