ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ ಟ್ರಾಫಿಕ್ ಸಮಸ್ಯೆಗೆ ಕಡೆಗೂ ಕೊಂಚ ರಿಲೀಫ್ ಸಿಕ್ಕಿದೆ.
ಕಳೆದ ಎರಡು ವರ್ಷಗಳ ಹಿಂದೆ ಆರಂಭವಾಗಿದ್ದ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ಭಾಗಶಃ ಮುಕ್ತಾಯಗೊಂಡಿದೆ. ಕುಂದಾಪುರ ಭಾಗದಿಂದ ಉಡುಪಿ ಕಡೆಗೆ ಬರುವ ವಾಹನಗಳಿಗೆ ವನ್ ವೇ ಓಡಾಡಲು ಪ್ರವೇಶ ಅವಕಾಶ ಕಲ್ಪಿಸಲಾಗಿದೆ.
ಡಬಲ್ ರೋಡ್ ನ ಪೈಕಿ ಒಂದು ರಸ್ತೆಯನ್ನು ಕಂಪ್ಲೀಟ್ ಮಾಡಲಾಗಿದ್ದು, ಮತ್ತೊಂದು ರಸ್ತೆಯನ್ನು ಕೆಲವೇ ದಿನಗಳಲ್ಲಿ ಓಡಾಟಕ್ಕೆ ಮುಕ್ತ ಮಾಡುವ ಸಾಧ್ಯತೆ ಇದೆ. ಅಂಡರ್ ಪಾಸ್ ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿತ, ಬಂಡೆ ಕಲ್ಲು ಸಿಕ್ಕಿದ ಕಾರಣ ಕಾಮಗಾರಿ ವಿಳಂಬವಾಗಿತ್ತು. ಮಳೆಗಾಲದ ನಂತರ ಇನ್ನೊಂದು ರಸ್ತೆಯ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.