ಉಪ್ಪಳ : ಶ್ರೀ ಧೂಮಾವತಿ ಕೋಮಾರು ಚಾಮುಂಡಿ ದೈವಸ್ಥಾನ ಚೆರುಗೋಳಿ ಶ್ರೀ ಉಳ್ಳಾಲ್ತಿ ಧೂಮಾವತಿ ಕೋಮಾರು ಚಾಮುಂಡಿ ಬಂಟ ದೈವಗಳ ವರ್ಷಾವಧಿ ಜಾತ್ರಾ ಮಹೋತ್ಸವವು [ಸೊರೋಲ್ ಜಾತ್ರೆ] ಡಿ.16ರಿಂದ 24ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.
ಡಿ.16ರಂದು ಮಧ್ಯಾಹ್ನ 3:30ಕ್ಕೆ ಕೋಳಿ ಕುಂಟ ಮುಹೂರ್ತ ನಡೆಯಲಿದೆ. ಡಿ.22ರಂದು ಬೆಳಿಗ್ಗೆ 9:30ಕ್ಕೆ ದೈವಸ್ಥಾನದಲ್ಲಿ ಗಣಹೋಮ, ಶುದ್ದಿ ಕಲಶ, ಮಧ್ಯಾಹ್ನ 12.30ಕ್ಕೆ ಅಂಬಾರು ಶ್ರೀ ಸದಾಶಿವ ಕ್ಷೇತ್ರದಲ್ಲಿ ಬಲಿವಾಡು ಕೂಟ, ಸಮಾರಾಧನೆ, ಸಾಮೂಹಿಕ ಪ್ರಾರ್ಥನೆ, ಸಂಜೆ 6.30ರಿಂದ ಭಜನೆ, ರಾತ್ರಿ 8ಕ್ಕೆ ಶ್ರೀ ಐವರು ದೈವಂಗಳ ದರ್ಶನ ಕೂಟ, ಪ್ರಸಾದ ವಿತರಣೆ, 8:30ಕ್ಕೆ ನಂದ್ರಾಡಿ ಬಾರಿಕೆ ಶ್ರೀ ಧೂಮಾವತಿ ದೈವಸ್ಥಾನ ಮತ್ತು ಇಚ್ಲಂಗೋಡು ಶ್ರೀ ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನದಿಂದ ಶ್ರೀ ದೈವಗಳ ಭಂಡಾರ ಹೊರಡುವುದು, ರಾತ್ರಿ 10ಕ್ಕೆ ಶ್ರೀ ದೈವಗಳ ಭಂಡಾರ ಶ್ರೀ ಸದಾಶಿವ ದೇವರ ಸನ್ನಿಧಿಗೆ ಆಗಮನ, ದರ್ಶನ ಮತ್ತು ದೈವಸ್ಥಾನದಲ್ಲಿ ಭಂಡಾರ ಏರುವುದು ಜರುಗಲಿದೆ. ಡಿ.23ರಂದು ರಾತ್ರಿ 10ಕ್ಕೆ ಶ್ರೀ ಧೂಮಾವತಿ ದೈವದ ನೇಮ, ಹರಿಕೆ, ಪ್ರಸಾದ ವಿತರಣೆ, ಒಲಸರಿ ಕಟ್ಟಿಗೆ ಶ್ರೀ ದೈವಗಳ ವರ್ಷಾವದಿ ಒಲಸರಿ ನಡೆಯಲಿದ್ದು, ಡಿ.24ರಂದು ರಾತ್ರಿ 12ಕ್ಕೆ ಶ್ರೀ ಬಬ್ಬರ್ಯ ದೈವದ ಕೋಲ, ಶ್ರೀ ಕೋಮಾರುರು ಚಾಮುಂಡಿ, ಬಂಟ ದೈವಗಳ ನೇಮ, ಹರಿಕೆ, ಪ್ರಸಾದ ವಿತರಣೆ, ಒಲಸರಿ ಕಟ್ಟಿಗೆ ಶ್ರೀ ದೈವಗಳ ವರ್ಷಾವಧಿ ಒಲಸರಿ ಹಾಗೂ 25ರಂದು ಬೆಳಿಗ್ಗೆ 6ಕ್ಕೆ ಶ್ರೀ ಉಳ್ಳಾಲ್ತಿ ದೈವದ ಕಟ್ಟೆಯಲ್ಲಿ ತಂಬಿಲ, ದರ್ಶನ, ಭಂಡಾರ ಇಳಿಯುವುದು, 7.30ಕ್ಕೆ ದೈವಸ್ಥಾನದಲ್ಲಿ ಶುದ್ದಿ ಕಲಶ ನಡೇಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಶ್ರೀ ಸದಾಶಿವ ಕಲಾವೃಂದದ ಸುವರ್ಣ ಮಹೋತ್ಸವದ ಅಂಗವಾಗಿ 22ರಂದು ಸ್ಥಳೀಯ ಮಕ್ಕಳಿಂದ ನೃತ್ಯ,
23ರಂದು ಸಂಜೆ 6.30ಕ್ಕೆ ರಸಮಂಜರಿ, 24ರಂದು ರಾತ್ರಿ 8ರಿಂದ “ಪುದರ್ ದೀದಾಂಡ್” ನಾಟಕ ಪ್ರದರ್ಶನ ನಡೆಯಲಿದೆ.