ಜಿ20 ಸಭೆಯಲ್ಲಿ ತೋರಿದ ಬೆಂಬಲಕ್ಕೆ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ದಕ್ಷಿಣ ಆಫ್ರಿಕನ್ನರು

Share with

ನವದೆಹಲಿ, ನವೆಂಬರ್ 24: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ (PM Modi) ಭಾರತಕ್ಕೆ ವಾಪಾಸಾಗಿದ್ದಾರೆ. ಈ ವೇಳೆ ಅವರು ದಕ್ಷಿಣ ಆಫ್ರಿಕಾದ ತಮ್ಮ 3 ದಿನಗಳ ಭೇಟಿಯ ಹೈಲೈಟ್ಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ದಕ್ಷಿಣ ಆಫ್ರಿಕಾದ ಬಳಕೆದಾರರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಮೋದಿಯವರ ಬಹುಪಕ್ಷೀಯ ಸಭೆಗಳು, ದಕ್ಷಿಣ ಆಫ್ರಿಕಾದ ಅಧ್ಯಕ್ಷರಿಗೆ ನೀಡಿದ ಸಲಹೆಗಳು, ಶೃಂಗಸಭೆಯಲ್ಲಿನ ಸಕ್ರಿಯ ಭಾಗವಹಿಸುವಿಕೆ, ಶೃಂಗಸಭೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ರೀತಿ, ರಾಜತಾಂತ್ರಿಕ ಕ್ರಮಗಳ ಬಗ್ಗೆ ದಕ್ಷಿಣ ಆಫ್ರಿಕನ್ನರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ದಕ್ಷಿಣ ಆಫ್ರಿಕಾದ ಜನರು ಈ ಬಗ್ಗೆ ಪೋಸ್ಟ್‌ಗಳನ್ನು ಹಾಕಿದ್ದಾರೆ. “ಜಿ20 ಉದ್ದಕ್ಕೂ ಭಾರತವು ದಕ್ಷಿಣ ಆಫ್ರಿಕಾ ಮತ್ತು ಖಂಡದ ಕಡೆಗೆ ಎಷ್ಟು ಬೆಂಬಲ ಮತ್ತು ದಯೆಯನ್ನು ಹೊಂದಿದೆ ಎಂಬುದು ವ್ಯಕ್ತವಾಯಿತು. ಭಾರತಕ್ಕೆ ನಮ್ಮಿಂದ ತುಂಬಾ ಪ್ರೀತಿಯನ್ನು ಕಳುಹಿಸುತ್ತಿದ್ದೇವೆ!” ಎಂದು ಕಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು ಬಳಕೆದಾರರು ಪ್ರಧಾನಿ ಮೋದಿಯವರನ್ನು “#G20SouthAfrica ಶೃಂಗಸಭೆಯ ಅಧಿಕೃತ ಪ್ರಭಾವಿ” ಎಂದು ಬಣ್ಣಿಸಿದ್ದಾರೆ. “ಮೋದಿ ಅವರು ಇಲ್ಲಿ ತಮ್ಮ ವಾಸ್ತವ್ಯದ ಉದ್ದಕ್ಕೂ ಸರಿಯಾದ ವಿಷಯದೊಂದಿಗೆ ಟೈಮ್‌ಲೈನ್ ಅನ್ನು ಹಾಕಿಕೊಂಡಿದ್ದರು. ಅವರು ಹಲವು ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು, ಅವರು ಸದಾ ಕಾರ್ಯಾಚರಣೆಯಲ್ಲಿದ್ದರು” ಎಂದು ಶ್ಲಾಘಿಸಿದ್ದಾರೆ.


Share with

Leave a Reply

Your email address will not be published. Required fields are marked *