ಬಂಟ್ವಾಳ ಸಂಚಾರ ಠಾಣೆಯ ಕಾಮಗಾರಿ ವೀಕ್ಷಿಸಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್

Share with

ಬಂಟ್ವಾಳ: ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಮಸೀದಿ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಬಂಟ್ವಾಳ ಸಂಚಾರ ಠಾಣೆಯ ಕಾಮಗಾರಿಯನ್ನು ವೀಕ್ಷಿಸಿದರು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಬಂಟ್ವಾಳ ಸಂಚಾರ ಠಾಣೆಯ ಕಾಮಗಾರಿಯನ್ನು ವೀಕ್ಷಿಸಿದರು.

ಅಕ್ಕರಂಗಡಿಯಲ್ಲಿ ಸುಮಾರು 75 ಸೆಂಟ್ಸ್ ಜಾಗದಲ್ಲಿ 2.44 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಅವರು ಠಾಣೆಯ ಹೊರ ಹಾಗೂ ಒಳವಿನ್ಯಾಸಗಳ ಬಗ್ಗೆ ಚರ್ಚಿಸಿ, ಕೆಲವು ಮಾರ್ಪಡುಗಳನ್ನು ಮಾಡುವಂತೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಅವರಿಗೆ ತಿಳಿಸಿದರು.

ಠಾಣೆಯ ನಿರ್ಮಾಣದ ಗುಣಮಟ್ಟದಲ್ಲಿ ಯಾವುದೇ ಕಳಪೆಯಾಗಬಾರದು. ಉತ್ತಮ ರೀತಿಯಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಬೇಕು ಎಂದು ಗುತ್ತಿಗೆದಾರರಿಗೆ ಹೇಳಿದರು.

ಪೋಲೀಸ್ ಹೌಸಿಂಗ್ ಕಾರ್ಪೋರೇಷನ್ ಎ.ಇ.ಇ. ರಾಜೇಶ್, ಗುತ್ತಿಗೆದಾರ ಪುನೀತ್ ಶೆಟ್ಟಿ, ಡಿ.ವೈ.ಎಸ್.ಪಿ. ವಿಜಯಪ್ರಸಾದ್, ಇನ್ಸ್ ಪೆಕ್ಟರ್ ಆನಂತ ಪದ್ಮನಾಭ, ಟ್ರಾಫಿಕ್ ಪಿ‌ಎಸ್ಐ ಗಳಾದ ಸುತೇಶ್ ಮತ್ತು ಸಂಜೀವ ಅವರು ಹಾಜರಿದ್ದರು.


Share with

Leave a Reply

Your email address will not be published. Required fields are marked *