IPL 2026ರ ಉದ್ಘಾಟನಾ ಪಂದ್ಯದಲ್ಲಿ ಇಂದು RCB ವಿರುದ್ಧ SRH ತಂಡ ಕಣಕ್ಕೆ ಇಳಿಯುತ್ತಿದೆ. ಕಳೆದ ವರ್ಷ ಸಂಭವಿಸಿದ ದುರಂತದಲ್ಲಿ ಮೃತಪಟ್ಟ 11 ಜನ RCB ಅಭಿಮಾನಿಗಳಿಗೆ ಇಂದು ಮೌನಾಚರಣೆ ಮೂಲಕ ವಿಶೇಷ ಗೌರವ ಸಲ್ಲಿಸಲಾಗಿದೆ.

2025ರ ಜೂ. 4ರಂದು RCB ತಂಡದ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಕಪ್ಪು ಚುಕ್ಕೆಯಂತ್ತಿದ್ದ ಘಟನೆಯನ್ನು ಸ್ಮರಿಸಿರುವ RCB ಮ್ಯಾನೇಜ್ಮೆಂಟ್, ಈ ಬಾರಿ ಅತ್ಯಂತ ಭಾವುಕವಾಗಿ ಅವರಿಗೆ ಸಂತಾಪ ಸೂಚಿಸಿದೆ.




