ಸುಬ್ರಹ್ಮಣ್ಯ: ಗುಡ್ ಪ್ರೈ ಡೇ ವಾರಾಂತ್ಯದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ಕೇರಳದ ಕರಾವಳಿ ನಗರಿ ಕಣ್ಣೂರು ನಡುವೆ ಮಂಗಳೂರು ಜಂಕ್ಷನ್ ಮಾರ್ಗವಾಗಿ ಒಂದು ಟ್ರಿಪ್ ವಿಶೇಷ ರೈಲನ್ನು ಓಡಿಸಲಿದೆ.

ರೈಲು ಸಂಖ್ಯೆ 06551 ಯಶವಂತಪುರ-ಕಣ್ಣೂರು ವಿಶೇಷ ಎಕ್ಸ್ಪ್ರೆಸ್ ರೈಲು ಎ.2ರಂದು ಬೆಳಗ್ಗೆ 11.50ಕ್ಕೆ ಯಶವಂತಪುರದಿಂದ ಹೊರಟು, ಎ.3ರಂದು ಮುಂಜಾನೆ 3ಕ್ಕೆ ಕಣ್ಣೂರು ತಲುಪಲಿದೆ. ಮರಳಿ ಪ್ರಯಾಣದಲ್ಲಿ, ರೈಲು ಸಂಖ್ಯೆ 06552 ಎ. 3ರಂದು ಬೆಳಗ್ಗೆ 8.45ಕ್ಕೆ ಕಣ್ಣೂರಿನಿಂದ ಹೊರಟು, ಅದೇ ದಿನ ರಾತ್ರಿ 9.30ಕ್ಕೆ ಯಶವಂತಪುರವನ್ನು ತಲುಪಲಿದೆ.




