ಉಪ್ಪಳ: ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ದೇವರ ಸಾನಿಧ್ಯಾಭಿವೃದ್ದಿಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ವಿಶೇಷ ಕಾರ್ತಿಕ ದೀಪೋತ್ಸವ ನ.14ರಿಂದ ಆರಂಭಗೊಂಡು ಡಿ.12 ರ ತನಕ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರವರ ಹಾಗೂ ವೇದಮೂರ್ತಿ ಗಣೇಶ ನಾವಡರ ನೇತೃತ್ವದಲ್ಲಿ ನಡೆಯಲಿದೆ.


ಈ ಸಂದರ್ಭದಲ್ಲಿ ದಿನ ನಿತ್ಯ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಹರಿನಾಮ ಸಂಕೀರ್ತನೆ, ಅನ್ನಸಂತರ್ಪಣೆ ಹಾಗೂ ವಿಶೇಷ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನ.14 ರಂದು ಪ್ರಾತ:ಕಾಲ 7ಕ್ಕೆ ಮಹಾಪೂಜೆ, 8 ರಿಂದ ಗಣಪತಿ ಹೋಮ, 9 ರಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆ, ನೂತನವಾಗಿ ನಿರ್ಮಿಸಿದ ಕ್ಷೇತ್ರದ ಒಳಾಂಗಣದ ಶಾಶ್ವತ ಚಪ್ಪರದ ಲೋಕಾರ್ಪಣೆ, ಉಗ್ರಾಣ ತುಂಬಿಸುವುದು.
ಈ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಶ್ರೀಗುರುದೇವಾನಂದ ಸ್ವಾಮೀಜಿ, ಕೊಂಡೆವೂರು ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣುಅಸ್ರ, ರಾಜ ಪುರೋಹಿತರಾದ ಶ್ರೀ ವೇದಮೂರ್ತಿ ಚಕ್ರಪಾಣಿ ದೇವಪೂಜತ್ತಾಯ, ಶಶಿಧರ ಶೆಟ್ಟಿ, ಕೆ.ಸುರೇಶ್, ಈಶ್ವರ್.ಕೆ ಐಲ್, ಲಕ್ಷ್ಮಿನಾರಾಯಣ ನಾಯ್ಕ್, ಗೋಪಾಲಕೃಷ್ಣ ಮಯ್ಯ, ಚಿದಾನಂದ ಮಯ್ಯ, ಕಮಲ ಶೆಟ್ಟಿ ಕಂಗ್ವೆ, ಪ್ರೇಮ ಸುಬ್ಬ ಪೂಜಾರಿ ಉಪಸ್ಥಿತರಿರುವರು.




