ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರಿಗೆ ವಿಶೇಷ ರೈಲು

Share with

ಉಡುಪಿ: ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಜನರ ವಿಶೇಷ ಬೇಡಿಕೆಯಂತೆ ಯಶವಂತಪುರ- ಮಡಗಾಂವ್ ಜಂಕ್ಷನ್- ಯಶವಂತಪುರ ನಡುವೆ ಕೊಂಕಣ ರೈಲ್ವೆಯ ಸಹಯೋಗದೊಂದಿಗೆ ನೈರುತ್ಯ ರೈಲ್ವೆ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ.

ರೈಲು ನಂ.06507 ಯಶವಂತಪುರ- ಮಡಗಾಂವ್ ಜಂಕ್ಷನ್ ಎಕ್ಸ್‌ಪ್ರೆಸ್‌ ವಿಶೇಷ ರೈಲು ಫೆ.13ರಂದು ಶುಕ್ರವಾರ ಅಪರಾಹ್ನ 12:30ಕ್ಕೆ ಯಶವಂತಪುರ ದಿಂದ ಹೊರಟು ಮರುದಿನ ಮುಂಜಾನೆ 6:45ಕ್ಕೆ ಮಡಗಾಂವ್‌ ತಲುಪಲಿದೆ.

ರೈಲು ನಂ.06508 ಮಡಗಾಂವ್ ಜಂಕ್ಷನ್- ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಫೆ.16ರ ಸೋಮವಾರ ಬೆಳಗ್ಗೆ 11 ಗಂಟೆಗೆ ಮಡಗಾಂವ್ ಜಂಕ್ಷನ್‌ನಿಂದ ಹೊರಟು ಮರುದಿನ ಮುಂಜಾನೆ 4:45ಕ್ಕೆ ಯಶವಂತಪುರ ತಲುಪಲಿದೆ.


Share with

Leave a Reply

Your email address will not be published. Required fields are marked *