ಜನವರಿ 03 ಕ್ಕೆ ಕೊಂಡೆವೂರು ಮಠದಲ್ಲಿ ಶ್ರೀಚಕ್ರ ಪೂಜೆ

Share with

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಬ್ರಹ್ಮಶ್ರೀ ವಿನೀತ್‌ ಭಟ್‌ ತಿರುವನಂತಪುರ ಇವರ ಆಚಾರ್ಯತ್ವದಲ್ಲಿ ದಿನಾಂಕ 03-01-2026 ಶನಿವಾರ ಲೋಕಕಲ್ಯಾಣಾರ್ಥವಾಗಿ ಶ್ರೀಚಕ್ರ ನವಾವರಣ ಪೂಜೆ ವಿವಿಧ, ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಆ ದಿನ ಪ್ರಾತಃಕಾಲ 7 ಕ್ಕೆ ಗಣಪತಿ ಹವನ, 10ಕ್ಕೆ ಶ್ರೀಚಕ್ರ ಪೂಜೆ ಆರಂಭ. 10:30ಕ್ಕೆ ನವಾವರಣ ಕೀರ್ತನಾಲಾಪನೆ. ಬಳ್ಳಪದವು ಯೋಗೀಶ ಶರ್ಮ ಮತ್ತು ಬಳಗ  ವೀಣಾವಾದಿನಿ, ಮಧ್ಯಾಹ್ನ 12:30ಕ್ಕೆ ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ 4:30ಕ್ಕೆ ಸಾಮೂಹಿಕ ಶ್ರೀ ಲಲಿತಾಸಹಸ್ರನಾಮ ಪಾರಾಯಣ.  7:00ಕ್ಕೆ ಶ್ರೀ ಮದ್‌ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಚಿತ್ತೈಸಲಿದ್ದಾರೆ. ಬಳಿಕ ಅಷ್ಟಾವದಾನ ಸೇವೆ ಜರಗಲಿರುವುದು. ರಾತ್ರಿ 7:30ಕ್ಕೆ ಮಹಾಪೂಜೆ. ಬಳಿಕ ಅನ್ನಸಂತರ್ಪಣೆ. ರಾತ್ರಿ ಘಂಟೆ 8 ರಿಂದ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ತಾಲೀಮು ಪ್ರದರ್ಶನ ಜರಗಲಿರುವುದೆಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share with

Leave a Reply

Your email address will not be published. Required fields are marked *