ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ಜಾತ್ರೋತ್ಸವಕ್ಕೆ ಗೊನೆಮುಹೂರ್ತ

Share with

ಪುತ್ತೂರು: ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಡಿ.14 ಮತ್ತು 15 ರಂದು ನಡೆಯಲಿರುವ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಕ್ಕೆ ಡಿ. 7 ರಂದು ಗೊನೆ ಮುಹೂರ್ತ ನೆರವೇರಿತು. ದೇವಸ್ಥಾನದಲ್ಲಿ ಪೂಜೆ ಪ್ರಾರ್ಥನೆ ನೆರವೇರಿಸಿದ ಬಳಿಯ ಗೋಪಾಲಕೃಷ್ಣ ಇವರ ತೋಟದಿಂದ ಕ್ಷೇತ್ರದ ತಂತ್ರಿಗಳಾದ  ಪ್ರೀತಮ್ ಪುತ್ತೂರಾಯ ಇವರ ನೇತೃತ್ವದಲ್ಲಿ ಅರ್ಚಕರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಗೊನೆ ಕಡಿಯಲಾಯಿತು. ದೇವಸ್ಥಾನದ ಅಧ್ಯಕ್ಷರಾದ ಗಂಗಾಧರ ಅಮೀನ್ ಹೊಸಮನೆ, ಕಾರ್ಯದರ್ಶಿಗಳಾದ ಜಯಂತ್ ಶೆಟ್ಟಿ ಕಂಬಳದಡ್ಡ, ಶೇಷಪ್ಪ ಗೌಡ, ಕೃಷ್ಣಪ್ಪಗೌಡ, ಆನಂದ ಅಮೀನ್  ಹೊಸ ಮನೆ, ಅಶೋಕ್ ಗೌಡ, ಬೇಕಲ್ ವಿಲ್ಲಾ, ನವೀನ್ ರೈ ಮಜಲುಮನೆ, ತಾರನಾಥ್ ಮೆರ್ಲ, ಜಯರಾಮ್ ಆಚಾರ್ಯ, ಜಿನ್ನಪ್ಪ ಮಡಿವಾಳ, ಗೋಪಾಲ್ ಪೂಜಾರಿ ಕಂಬಳದಡ್ಡ, ಸುಗುಣ,ನಯನ ಪ್ರದೀಪ್  ಮತ್ತು ಹಲವು ಗಣ್ಯರು e ಸಂದರ್ಭದಲ್ಲಿ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *