ಶ್ರೀಕೃಷ್ಣ ಪೂಜಾಪರ್ಯಾಯ ಪೀಠಾರೋಹಣ ಅಂಗವಾಗಿ ಪೂಜ್ಯ ಶೀರೂರು ಶ್ರೀಗಳು ಕೊಂಡೆವೂರು ಮಠಕ್ಕೆ ಆಗಮನ

Share with

ಮುಂದಿನ ವರ್ಷ ಉಡುಪಿಯ ಶ್ರೀಕೃಷ್ಣ ಪೂಜಾಪರ್ಯಾಯ ಪೀಠಾರೋಹಣಗೈಯಲಿರುವ ಶೀರೂರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ  ವೇದವರ್ದನ ತೀರ್ಥ ಶ್ರೀ ಪಾದಂಗಳವರು ದಿ.16.12.2024 ಆದಿತ್ಯವಾರದಂದು ತಮ್ಮ ಪಟ್ಟದ ದೇವರ ಸಹಿತರಾಗಿ ಕೊಂಡೆವೂರು ಮಠಕ್ಕೆ ಚಿತ್ತೆöÊಸಿ ಮೊಕ್ಕಾಂ ಹೂಡಿದರು. ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ “ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳವರು” ಭಕ್ತವೃಂದದೊಡನೆ ಯತಿವರ್ಯರನ್ನು ಪೂರ್ಣಕುಂಭದೊಡನೆ ಸ್ವಾಗತಿಸಿದರು. ನಂತರ ಶ್ರೀ ಗಾಯತ್ರೀ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪೂಜ್ಯ  ಕೊಂಡೆವೂರು ಶ್ರೀಗಳು ಪೂಜ್ಯ ಶೀರೂರು ಶ್ರೀಗಳವರಿಗೆ ಗೌರವಾರ್ಪಣೆ ಸಲ್ಲಿಸಿದರು. ಬಳಿಕ ಶೀರೂರು ಶ್ರೀಗಳು ತಮ್ಮ ಆಶೀರ್ವಚನದೊಂದಿಗೆ ಪರ್ಯಾಯ ಮಹೋತ್ಸವಕ್ಕೆ ಸಮಸ್ತರನ್ನು ಆಮಂತ್ರಿಸಿದರು . ನಂತರ ಕೊಂಡೆವೂರು ಶ್ರೀಗಳು ಆಶೀರ್ವಚನಗೈದರು. ಶ್ರೀ  ಮಂಜುನಾಥ ಉಡುಪ ವೇದಿಕೆಯಲ್ಲಿ ವಿರಾಜಮಾನರಾಗಿರುವ ಯತಿದ್ವಯರ ಕುರಿತು ವಿವರಣೆ ನೀಡಿದರು.
ಮಂಜೇಶ್ವರ ತಾಲೂಕಿನ ಅನೇಕ ದೇವಾಲಯಗಳು, ಭಜನಾಮಂದಿರಗಳು, ಸಂಘಸAಸ್ಥೆಗಳ ಪ್ರಮುಖರು ಶೀರೂರು ಶ್ರೀಗಳವರಿಗೆ ಗೌರವಾರ್ಪಣೆ ಸಲ್ಲಿಸಿದರು. ಕು ಗಾಯತ್ರಿ ಮತ್ತು  ಕು.ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆ ಮಾಡಿದ ಕಾರ್ಯಕ್ರಮದಲ್ಲಿ  ಶ್ರೀ ಕೆ ಯಂ ಗಂಗಾಧರ ನ್ಯಾಯವಾದಿಗಳು ಕೊಂಡೆವೂರು ಆಶ್ರಮದ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತಾ ಸ್ವಾಗತಿಸಿದರು.ಶ್ರೀ ದಿನಕರ್ ಹೊಸಂಗಡಿಯವರು ಕಾರ್ಯಕ್ರಮವನ್ನು  ನಿರೂಪಿಸಿದರು.
              ಕಾರ್ಯಕ್ರಮದ ಬಳಿಕ ಶ್ರೀಗಳವರು ತೊಟ್ಟಿಲು ಪೂಜಾಸೇವೆ ಮತ್ತು ದಿ.17.12.2024 ಬೆಳಿಗ್ಗೆ ತಮ್ಮ ಪಟ್ಟದ ದೇವರ ಪೂಜೆಗಳನ್ನು ಕೊಂಡೆವೂರು ಮಠದ ಮೊಕ್ಕಾಂನಲ್ಲಿ ನೆರವೇರಿಸಿದರು.


Share with

Leave a Reply

Your email address will not be published. Required fields are marked *