
ಬಂಟ್ವಾಳ: ಬಂಟ್ವಾಳ ವಲಯದ ನಾವೂರು ಕಾರ್ಯಕ್ಷೇತ್ರದ ಹಳೆ ಗೇಟ್ ಶ್ರೀಮತಿ ಚೆನ್ನಮ್ಮ ರವರಿಗೆ ನಡೆಯಲು ಅಸಾಧ್ಯ ವಾದುದರಿಂದ ಶ್ರೀ ಕ್ಷೇತ್ರ ಸಮುದಾಯ ಅಭಿವೃದ್ಧಿ ವಿಭಾಗದಿಂದ ನೀಡಿರುವ ವೀಲ್ ಚೇರ್ ಅನ್ನು ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣರವರು ವಿತರಿಸಿದರು.
ಈ ಸಂದರ್ಭದಲ್ಲಿ ಜನಜಾಗೃತಿ ಸದಸ್ಯರಾದ ಸದಾನಂದ ಗೌಡ ಹಳೆ ಗೇಟ್, ಒಕ್ಕೂಟ ಅಧ್ಯಕ್ಷರಾದ ವಸಂತ ಹಳೆಗೇಟ್, ಮೇಲ್ವಿಚಾರಕರು, ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.