ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಂಟ್ಟಾಳ ಇದರ ವತಿಯಿಂದ ಜನಮಂಗಳ ಕಾರ್ಯಕ್ರಮದ ಅಡಿಯಲ್ಲಿ ಬಂಟ್ವಾಳ ತಾಲೂಕು ರಾಯಿ ಗ್ರಾಮದ ದೈಲ ನಿವಾಸಿ ಶ್ರೀ ವಿಶ್ವನಾಥ ಪೂಜಾರಿ ಮತ್ತು ಶ್ರೀಮತಿ ಸುಂದರಿ ದಂಪತಿಯ ಪುತ್ರ ಪರ್ಕಿನ್ಸನ್ ಖಾಯಿಲೆಯಿಂದ ಬಳಲುತ್ತಿರುವ ಶ್ರೀ ಸಂದೇಶ್ (ನವೀನ್) ಪೂಜಾರಿ ಯವರಿಗೆ ವೀಲ್ ಚೇರ್ ವಿತರಣೆಯನ್ನು ಬಂಟ್ವಾಳ ತಾಲೂಕು ಸಿದ್ಧಕಟ್ಟೆ ವಲಯ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ ಶ್ರೀ ಸದಾನಂದ ಶೀತಲ್ ವಿತರಿಸಿದರು. ರಾಯಿ ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ಶ್ರೀಮತಿ ಶ್ಯಾಮಲ ಮತ್ತು ಸದಸ್ಯರಾದ ಸುರೇಶ್ ಪೂಜಾರಿಯವರು ಉಪಸ್ಥಿತರಿದ್ದರು.