
ಸಕಲೇಶಪುರ : ಬಿರಡಹಳ್ಳಿ ಶ್ರೀ ಮಾರಿಕಾಂಭ ಸೇವಾ ಸಮಿತಿ ವತಿಯಿಂದ ದಿನಾಂಕ 22.5.2025 ಗುರುವಾರ ಮತ್ತು 23.05.2025ನೇ ಶುಕ್ರವಾರದಂದು ಶ್ರೀ ರಾಮ ಮಂದಿರ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ದೇವಸ್ಥಾನ ಸಮಿತಿ ಅವರು ತಿಳಿಸಿದ್ದಾರೆ.
ದಿನಾಂಕ 23-05-2025 ನೇ ಶುಕ್ರವಾರ ಬೆಳಿಗ್ಗೆ 8-00 ರಿಂದ ಮಹಾಗಣಪತಿ ಹೋಮ, ಶ್ರೀ ದೇವರ ಪ್ರತಿಷ್ಠೆ ನೆಡೆಯಲಿದ್ದು ಬೆಳಗ್ಗೆ 9-45 ರಿಂದ 10-45 ರ ವರೆಗೆ ನಡೆಯುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಮ್ಯಾಂಜೆ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳುಕುರಾಯ ಪುತ್ತೂರು ರಿಂದ ನೆಡೆಯಲಿದೆ.ಶ್ರೀ ರಾಮ, ಲಕ್ಷ್ಮಣ, ಸೀತಾಮಾತಾ ಮತ್ತು ಅಂಜನೇಯಸ್ವಾಮಿ ಯವರ ಉತ್ಸವ ಮೂರ್ತಿಗಳ ಪೂಜಾ ಕಾರ್ಯಕ್ರಮಗಳು ನೆರವೇರುವುದು.ಹಾಗೂ ಬೆಳಿಗ್ಗೆ 11-00 ಗಂಟೆಗೆ ಮಹಾಮಂಗಳಾರತಿ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಾರಿಕಾಂಬ ಸೇವಾ ಸಮಿತಿ ಕಾರ್ಯಕಾರಿ ಮಂಡಳಿ ಹಾಗೂ ಬಿರಡಹಳ್ಳಿ ಗ್ರಾಮಸ್ಥರು ಕೇಳಿಕೊಂಡಿದ್ದಾರೆ.





