ಕೊಂಡೆವೂರು ಮಠದಲ್ಲಿ ಶ್ರೀ ಶಾರದ ಪ್ರತಿಷ್ಠೆ- ಸರಸ್ವತೀ ಹವನ

Share with

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ  ನಡೆಯುತ್ತಿರುವ ನವರಾತ್ರಿ ಮಹೋತ್ಸವ ಪ್ರಯುಕ್ತ ದಿ.09.10.2024 ರಂದು ಬೆಳಿಗ್ಗೆ 7.30 ಕ್ಕೆ ಶ್ರೀ ಶಾರದ ಪ್ರತಿಷ್ಠೆ ಮತ್ತು  ವಿದ್ಯಾರ್ಥಿಗಳ ಜ್ಞಾನ ಶಕ್ತಿ ಹೆಚ್ಚಿಸುವ ಸಲುವಾಗಿ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ವೇದಮೂರ್ತಿ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ “ಸರಸ್ವತೀ ಹವನ” ನಡೆಯಿತು. ಈ ಸಂದರ್ಭದಲ್ಲಿ  ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು.
ದಿ.11.10.2024ರ ದುರ್ಗಾಷ್ಟಮಿಯಂದು ವಿದುಷಿ ಉಷಾ ಈಶ್ವರ್ ಭಟ್ ಕಾಸರಗೋಡು ಮತ್ತು ಬಳಗದವರಿಂದ ಕರ್ನಾಟಕ ಶಾಸ್ತಿçÃಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ದಿ.12.10.2024  ವಿಜಯದಶಮಿಯ ಶುಭದಿನದಂದು ಬೆ.7.30 ಕ್ಕೆ ವಿದ್ಯಾರಂಭ, ಬೆ.8.00 ಕ್ಕೆ ವಾಹನಪೂಜೆ ಬಳಿಕ  ಕು.ಗಾಯತ್ರಿ ಮತ್ತು ಕು. ಶ್ರಾವಣ್ಯ ಕೊಂಡೆವೂರು ಇವರ “ಶಾಸ್ತ್ರೀಯ ಸಂಗೀತ ಕಾರ್ಯಕ್ರಮ”, ಮಧ್ಯಾಹ್ನ ಪೂಜೆಯ ನಂತರ ಶ್ರೀ ಮಠದ ನಕ್ಷತ್ರವನದಲ್ಲಿರುವ ಆನಂದತೀರ್ಥ ಪುಷ್ಕರಿಣಿಯಲ್ಲಿ ಶ್ರೀ ಶಾರದಾ ವಿಸರ್ಜನೆ   ನಡೆಯಲಿರುವುದು.


Share with

Leave a Reply

Your email address will not be published. Required fields are marked *