ಶ್ರೀ ವಿಶ್ವಕರ್ಮ ಯುವಕ ಸಂಘದು ವತಿಯಿಂದ ಮಂದಿರದ ಮುಂಭಾಗ ನಿರ್ಮಿಸಿದ ಮೇಲ್ಟಾವಣಿ ಲೋಕಾರ್ಪಣೆ

Share with

ಕಾಸರಗೋಡು ಸೆ: 16 ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ(ರಿ) ಇದರ ಮಾರ್ಗದರ್ಶನದಲ್ಲಿ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಶ್ರೀ ವಿಶ್ವಕರ್ಮ ಯುವಕ ಸಂಘದ  ವತಿಯಿಂದ ಕನ್ಯಾ ಸಂಕ್ರಮಣ ದಂದು “ಶ್ರೀ ವಿಶ್ವಕರ್ಮ ಪೂಜೆ” ಜರಗಿತು. ಅಂದು ಬೆಳಿಗ್ಗೆ ಧ್ವಜಾರೋಹಣ ಗೈಯಲಾಯಿತು. ಸಂಜೆ 6 ಗಂಟೆಗೆ ಭಜನೆ ಪ್ರಾರಂಭವಾಗಿ 8 ಗಂಟೆಗೆ, ಮಾಯಿಪ್ಪಾಡಿ ಪುರೋಹಿತ ಶ್ರೀ ಕೇಶವ  ಆಚಾರ್ಯರ ನೇತೃತ್ವದಲ್ಲಿ ಮಹಾಪೂಜೆ ನಡೆಯಿತು. ವಿಶೇಷ ಆಹ್ವಾನಿತರು ಊರ ಪರಊರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಫಿಂಗರ್ ಡ್ರಮ್ಮರ್ ನಲ್ಲಿ ಇಂಡಿಯಾ ಬುಕ್ ಓಫ್ ರೆಕೋರ್ಡ್(2022) ವಲ್ಡ್ ವೈಡ್ ಬುಕ್ ಓಫ್ ರೆಕೋರ್ಡ್ ಮತ್ತು ಟ್ಯಾಲೆಂಟ್ ಬುಕ್ ಓಫ್ ರೆಕೋರ್ಡ್(2024) ದಾಖಲೆ ನಿರ್ಮಿಸಿದ ಕಾಸರಗೋಡು ಕೋಟೂರಿನ ಮಣಿಕಂಠ ಆಚಾರ್ಯ ಮತ್ತು ಚೆರ್ಕಳ ಮಾರ್ಥೋಮ ಶಾಲೆಯಲ್ಲಿ 5 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪುಟಾಣಿ ಬಹುಮುಖ ಪ್ರತಿಭೆ ಪ್ರಿಥ್ವಿ ಮಹೇಶ್ ಆಚಾರ್ಯ ಇವರಿಗೆ ಶಾಲು ಹೊದಿಸಿ ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಮಂದಿರದ ಮುಂಬಾಗ ಮೇಲ್ಛಾವಣಿ ಕೆಲಸ ನಿರ್ವಹಿಸಿದ ಬಾಡೂರು ಲತೀಶ್ ಆಚಾರ್ಯ ಕೂಡ್ಲು ಇವರಿಗೆ ಶಾಲುಹೊದಿಸಿ ಫಲಪುಷ್ಪದೊಂದಿಗೆ ನೆನಪಿನ ಕಾಣಿಕೆ ನೀಡಲಾಯಿತು. ಪೂಜೆಯ ಪ್ರಯುಕ್ತ ಮಾಡಿದ ಲಕ್ಕಿಡಿಪ್ ಡ್ರಾ ಮಾಡಲಾಯಿತು. ಪೂಜಾ ಕೈಂಕರ್ಯಕ್ಕೆ ಹಲವರು ಪ್ರಾಯೋಜಕತ್ವ ವಹಿಸಿ ಕಾರ್ಯಕ್ರವನ್ನು ಯಶಸ್ವಿಗೊಳಿಸಿದರು. ಭಕ್ತಾದಿಗಳಿಗೆ ಉಪಹಾರ ವ್ಯವಸ್ಥೆಯನ್ನು ಮಾಡಲಾಯಿತು.

ಅಭಿನಂದನಾ ಕಾರ್ಯಕ್ರಮದಲ್ಲಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ(ರಿ) ಇದರ ಅಧ್ಯಕ್ಷರಾದ ಶ್ರೀ ಭುವನೇಶ ಆಚಾರ್ಯ ತಾಳಿಪ್ಪಡ್ಪು ಇವರು ಅಧ್ಯಕ್ಷ ಸ್ಥಾನ ವಹಿಸಿದರು, ಶ್ರೀ ವಿಘ್ನೇಶ್ ಆಚಾರ್ಯ ಇವರು ಅಥಿತಿಗಳಾಗಿ ಭಾಗವಹಿಸಿದರು, ಯುವಕ ಸಂಘದ ಅಧ್ಯಕ್ಷರಾದ ಶೀತಲ್ ಕುಮಾರ್ ಮಹಿಳಾ ಸಂಘದ ಅಧ್ಯಕ್ಷೆ ವೇದಾವತಿ ಸದಾಶಿವ ಆಚಾರ್ಯ ಉಪಸ್ಥಿತರಿದ್ದರು, ಯುವಕ ಸಂಘದ ಜತೆ ಕಾರ್ಯದರ್ಶಿ ಹರಿಪ್ರಸಾದ್ ಆಚಾರ್ಯ ಸ್ವಾಗತಿಸಿ ಮಹಿಳಾ ಸಂಘದ ಕಾರ್ಯದರ್ಶಿ ಶ್ರೀಮತಿ ಶ್ರೀವಳ್ಳಿ ಗಣೇಶ ಆಚಾರ್ಯ ಅಭಿನಂದನಾ ಪತ್ರ ವಾಚಿಸಿ ಯುವಕ ಸಂಘದ ಕಾರ್ಯದರ್ಶಿ ವಸಂತ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು.


Share with

Leave a Reply

Your email address will not be published. Required fields are marked *