ಆಸ್ಪತ್ರೆಯಲ್ಲಿ ಮಹಿಳೆ ಬಟ್ಟೆ ಬದಲಾಯಿಸುವ ದೃಶ್ಯ ಸೆರೆ ಹಿಡಿದ ಸಿಬಂದಿ ಬಂಧನ..!

Share with

ಬೆಂಗಳೂರು: ಶಸ್ತ್ರಚಿಕಿತ್ಸಾ ಕೊಠಡಿಯ ಡ್ರೆಸಿಂಗ್ ರೂಮ್‌ನಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವಾಗ ಮೊಬೈಲ್ ಇಟ್ಟು ಖಾಸಗಿ ವಿಡಿಯೋ ಮಾಡಿದ ಜೂನಿಯ‌ರ್ ಟೆಕ್ನಿಷಿಯನ್‌ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿ 2ನೇ ಹಂತದಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ನಿರ್ದೇಶಕ ಡಾ.ಚೇತನ್ ಎಂಬುವರು ನೀಡಿದ ದೂರಿನ ಮೇರೆಗೆ ಸುವೆಂದು ಮೊಹತಾ (23) ಎಂಬಾತನನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಸುವೆಂದು ಕಳೆದ ಒಂದು ವರ್ಷದಿಂದ ಜೂನಿ ಯರ್‌ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಕೊಟ್ಟಿ ಗೆಪಾಳ್ಯದ ಪಿಜಿಯೊಂದರಲ್ಲಿ ನೆಲೆಸಿದ್ದ. ಡಿ.20 ರಂದು ಬೆಳಗ್ಗೆ 8.30ರ ಸುಮಾರಿಗೆ ಶಸ್ತ್ರ ಚಿಕಿತ್ಸಾ ಘಟಕದ ಕೊಠಡಿಯಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವಾಗ ಆರೋಪಿ ಇಟ್ಟಿದ್ದ ಮೊಬೈಲ್ ಗಮನಿಸಿದ್ದಾರೆ. ಆತಂಕಗೊಂಡ ಸಿಬ್ಬಂದಿಯು ಮೊಬೈಲ್ ಪರಿಶೀಲಿಸಿ ದಾಗ ಗುಪ್ತವಾಗಿ ವಿಡಿಯೋ ಮಾಡುತ್ತಿರುವುದು ಗೊತ್ತಾಗಿದೆ. ಈ ಸಂಬಂಧ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *