ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ..! 39 ಮಂದಿ ಸಾವು, 500ಕ್ಕೂ ಹೆಚ್ಚು ಮಂದಿ ಗಾಯ..!!

Share with

ಚೆನ್ನೈ: ಟಿವಿಕೆ ಸಂಸ್ಥಾಪಕ ನಟ ವಿಜಯ್​ ಅವರ ಕರೂರ ಱಲಿಯಲ್ಲಿ ನಡೆಸ ಕಾಲ್ತುಳಿತ ದುರಂತ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ತಲ್ಲಣವನ್ನೇ ಸೃಷ್ಟಿಸಿದೆ. ಕಾಲ್ತುಳಿತದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ.

ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಪ್ರಚಾರದ ಭಾಗವಾಗಿ ಸೆಪ್ಟೆಂಬರ್‌ 13ರಿಂದ ಪ್ರತಿ ಶನಿವಾರ ಜನಸಂಪರ್ಕ ಱಲಿ ಆರಂಭಿಸಿದ್ದರು. ಈಗಾಗಲೇ ಎರಡು ರ‍್ಯಾಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ವು ಪ್ರತಿ ರ‍್ಯಾಲಿಯಲ್ಲಿ ಲಕ್ಷಾಂತರ ಜನ ಭಾಗಿಯಾಗಿ ವಿಜಯ್​ಗೆ ಬೆಂಬಲ ಸೂಚಿಸಿದ್ದರು.

ತಮಿಳುನಾಡಿನ ಕರೂರಿನಲ್ಲಿ ಸೆ.27ರಂದು ನಡೆದ ನಟ-ರಾಜಕಾರಣಿ ವಿಜಯ್ ದಳಪತಿ ರ‍್ಯಾಲಿಯಲ್ಲಿ ಉಂಟಾದ ಕಾಲ್ತುಳಿತಕ್ಕೆ 39 ಮಂದಿ ಬಲಿಯಾಗಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ದುರಂತಕ್ಕೆ ಕಾರಣವೇನು?

  • ಕಾರ್ಯಕ್ರಮದಲ್ಲಿ ಕೇವಲ 10,000 ಜನರಿಗೆ ಮಾತ್ರ ಅವಕಾಶ
  • ನಟ ವಿಜಯ್​ ರ್ಯಾಲಿಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಭಾಗಿ
  • ಸೀಮಿತ ಪ್ರದೇಶ ಕಿರಿದಾಗಿರೋ ಕಾರಣಕ್ಕೆ ಉಸಿರುಗಟ್ಟಿ ಸಾವು
  • ಬೆಳಗ್ಗೆಯೇ ರ‍ ್ಯಾಲಿಯನ್ನು ನಡೆಯಲು ಸಮಯ ನಿಗದಿಯಾಗಿತ್ತು
  • ಸುಮಾರು ಆರು ಗಂಟೆ ತಡವಾಗಿ ರ‍್ಯಾಲಿಗೆ ಆಗಮಿಸಿದ ವಿಜಯ್
  • ಹೆಚ್ಚಿನ ಜನ ಸೇರಿದ್ದು, ನಿಯಂತ್ರಿಸಲು ಪೋಲಿಸರಿಗೂ ಆಗಲಿಲ್ಲ
  • ಜನದಟ್ಟನೆಯಿಂದ ಉಸಿರಾಟ ಸಮಸ್ಯೆಯಾಗಿ ಮೂರ್ಚೆ ಹೋದರು
  • ಪುಟ್ಟ ಮಕ್ಕಳು ತಮ್ಮ ತಮ್ಮ ಕುಟುಂಬಸ್ಥರಿಂದ ದೂರ ಸರಿದರು
  • ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಕಾಲ್ತುಳಿತ ಸಂಭವಿಸಿ 39 ಜನ ಮೃತ
  • ಈ ದುರಂತಕ್ಕೆ ಆಯೋಜಕರೆ ಕಾರಣ, ವಿಜಯ್​ ಬಂಧನಕ್ಕೆ ಆಗ್ರಹ

ರಾಜ್ಯ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಕರೂರಿಗೆ ಧಾವಿಸಿದ್ದಾರೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೂರ್ ಜಿಲ್ಲಾ ಕಾರ್ಯದರ್ಶಿ ವಿ. ಸೆಂಥಿಲ್‌ಬಾಲಾಜಿ ಅವರಿಗೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


Share with

Leave a Reply

Your email address will not be published. Required fields are marked *