ಉಪ್ಪಳ: ಅಯೋಧ್ಯಯ ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀರಾಮನ ದಿವ್ಯ ಮೂರ್ತಿ ಪ್ರತಿಷ್ಟಾಪನೆ ಮತ್ತು ಲೋಕಾರ್ಪಣೆ ಪ್ರಯುಕ್ತ ಐಲ ತರುಣ ಕಲಾವೃಂದ ಇದರ ಆಶ್ರಯದಲ್ಲಿ ಐಲ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ವಠಾರದಲ್ಲಿ ವೀಶೇಷ ದೀಪಾಲಂಕಾರದೊಂದಿಗೆ ಸಂಭಮಾಚರಣೆ ಜ.22ರಂದು ಸಂಜೆ 5.30ರಿಂದ ನಡೆಯಲಿದೆ. ಅಂದು ನಡೆಯುವ ಸತ್ಸಂಗ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕುಟುಂಬ ಪ್ರಭೋದಿನಿ ಕಾರ್ಯಕಾರಿ ಸಮಿತಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸತ್ಸಂಗ ನಡೆಸುವರು.
ಖ್ಯಾತ ನಟ, ನಿರ್ದೇಶಕ, ರಂಗಕರ್ಮಿ ಕಾಸರಗೋಡು ಚಿನ್ನಾ, ಐಲ ಕ್ಷೇತ್ರದ ಆಡಳಿತ ಮೊಕ್ತೇಸರರು ಕೋಡಿಬೈಲು ನಾರಾಯಣ ಹೆಗ್ಡೆ ಉಪಸ್ಥಿತರಿರುವರು. ಬಳಿಕ ಪ್ರಖ್ಯಾತ ಗಾಯಕ ರವೀಂದ್ರ ಪ್ರಭು ಮತ್ತು ಬಳಗದವರಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಲಿದೆ.