ವೀಸಾ ಅವಧಿ ಮುಗಿದ ನಂತರವೂ ವಾಸ: ವಿದೇಶಿ ಪ್ರಜೆಗಳ ಬಂಧನ

Share with

ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ನೆಲೆಸಿದ್ದ ಇಬ್ಬರು ವಿದೇಶಿ ಪ್ರಜೆಗಳ ಬಂಧನ.

ಮಂಗಳೂರು: ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ನೆಲೆಸಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ನೈಜೀರಿಯಾದ ಅಂಕಿತೋಲಾ ಮತ್ತು ಘಾನಾದ ಸಲಾಮ್ ಕ್ರಿಶ್ಚಿಯನ್ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನದ ನಂತರ ಇಬ್ಬರನ್ನು ಬೆಂಗಳೂರಿನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(FRRO) ಮುಂದೆ ಹಾಜರುಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಶೀಲನೆಯ ನಂತರ, FRRO ಬೆಂಗಳೂರಿನಲ್ಲಿರುವ ಬಂಧನ ಕೇಂದ್ರದಲ್ಲಿಡಲು ನಿರ್ದೇಶಿಸಿದೆ.


Share with

Leave a Reply

Your email address will not be published. Required fields are marked *