ತಾಯಿಗೆ ತಲಾಖ್ ನೀಡಿ 2ನೇ ಮದುವೆಯಾದ ಮಲತಂದೆ; ಮನನೊಂದು ಮಗ ನೇಣಿಗೆ ಶರಣು!

Share with

ತಾಯಿಗೆ ತಲಾಖ್ ನೀಡಿ ಮಲ ತಂದೆ ಎರಡನೇ ಮದುವೆಯಾಗಿದ್ದರಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಳಬಾಗಿಲು ನಗರದ ರೆಹಮತ್ ನಗರದಲ್ಲಿ ಘಟನೆ ನಡೆದಿದ್ದು 25 ವರ್ಷದ ಅಫ್ನಾನ್ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ತನ್ನ ತಾಯಿ ಜಬೀನ್ ತಾಜ್‌ಗೆ ಮಲತಂದೆ ಅಕ್ಬರ್ ಆಲಿ ತಲಾಖ್ ನೀಡಿದ್ದನು. ಈ ವಿಚಾರವಾಗಿ ಅಫ್ನಾನ್​​ ಸಂಬಂಧಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದನು. ಆತ್ಮಹತ್ಯೆ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *