Stock Market: ಯುದ್ಧದ ಎಫೆಕ್ಟ್- ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ

Share with

ಮುಂಬೈ: ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಮುಂದುವರಿದ ಪರಿಣಾಮ, ತೈಲ ಹಾಗೂ ಅನಿಲ ಪೂರೈಕೆಯಲ್ಲಿ ಅಭಾವ ತಲೆದೋರಿದ ಪರಿಣಾಮ ಬುಧವಾರ (ಮಾ.11) ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತದೊಂದಿಗೆ ವಹಿವಾಟು ಮುಂದುವರಿದಿದೆ.

ಸಂವೇದಿ ಸೂಚ್ಯಂಕ 926ಕ್ಕೂ ಅಧಿಕ ಅಂಕ ಕುಸಿತದೊಂದಿಗೆ 77,280.55 ಅಂಕಗಳ ಮಟ್ಟದಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 208.25 ಅಂಕಗಳಷ್ಟು ಇಳಿಕೆಯೊಂದಿಗೆ 24,053.35 ಅಂಕಗಳ ಮಟ್ಟಕ್ಕೆ ಕುಸಿದಿದೆ.

ಎನ್ ಎಸ್ ಇ, ಬಿಎಸ್ ಇ ಕುಸಿತದಿಂದಾಗಿ ಕೆಇಐ ಇಂಡಸ್ಟ್ರೀಸ್ ಲಿಮಿಟೆಡ್, ಕೋಲ್ ಗೇಟ್ ಪಾಮೋಲಿವ್ ಇಂಡಿಯಾ ಲಿ, ರೆಡಿಬ್ಬಂನ್ ಲಿಮಿಟೆಡ್, ಫಿನೋಲೆಕ್ಸ್ ಕೇಬಲ್ಸ್, ಟಿವಿಎಸ್ ಮೋಟಾರ ಕಂಪನಿ. ವೋಡಾಫೋನ್ ಐಡಿಯಾ, ಯೆಸ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.

ಮತ್ತೊಂದೆಡೆ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್, ಜಿಂದಾಲ್ ಸಾ ಲಿಮಿಟೆಡ್, టిటిరే @ees లిమిటిడో, టౌటౌ స్టిలో, ఐడిఎఫ్ సి ఫెన్షా బ్యాంశా, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್, ಗುಜರಾತ್ ಗ್ಯಾಸ್ ಲಿಮಿಟೆಡ್, ಸ್ಟರ್ಲೈಟ್ ಟೆಕ್ನಾಲಜೀಸ್ ಲಿಮಿಟೆಡ್ ಷೇರುಗಳು ಲಾಭಗಳಿಸಿದೆ.


Share with

Leave a Reply

Your email address will not be published. Required fields are marked *