ಬೀದಿ ನಾಯಿಗಳ ಅಟ್ಟಹಾಸ: ಸಾರ್ವಜನಿಕರು ಆತಂಕದಲ್ಲಿ

Share with

ಮಂಜೇಶ್ವರ : ಬೀದಿ ನಾಯಿಗಳ ಹಟ್ಟಹಾಸ ಮಿತಿ ಮೀರಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ನಾಯಿಗಳ ಉಪಟಳದಿಂದ ಜನರಿಗೆ ಮನೆಯಿಂದ ಹೊರಗಿಳಿಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದಾಗಿ ದೂರಲಾಗಿದೆ. ಯಾವುದೇ ಬೀದಿ ಬೀದಿ ಗಳಲ್ಲೂ ನಾಯಿಗಳು ಗುಂಪು ಗುಂಪಾಗಿ ಸೇರಿ ಕೊಂಡು ದ್ವಿಚಕ್ರ ವಾಹನದಲ್ಲಾಗಲೀ ನಡೆದು ಕೊಂಡು ಹೋಗುವವರನ್ನಾಗಿ ಬೆನ್ನಟ್ಟಿ ದಾಳಿ ನಡೆಸುತ್ತಿದೆ. ನಾಯಿಗಳ ಕಾಟದಿಂದ ಜನತೆ ಭಯ ಭೀತಿಯನ್ನು ಎದುರಿಸುತ್ತಿರುವಾಗ ಈ ಬಗ್ಗೆ ಸ್ಪಂಧಿಸಬೇಕಾದ ಅಧಿಕಾರಿಗಳು ಮೌನವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಜಾನೆ ಮದ್ರಸಕ್ಕೆ ತೆರಳು ವಿದ್ಯರ‍್ಥಿಗಳ ಮೇಲೂ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಇದರ ಜೊತೆಯಾಗಿ ಆಡು ಹಾಗೂ ಹಸುಗಳು ಕೂಡಾ ನಾಯಿಯ ದಾಳಿಗೆ ಬಲಿಯಾಗುತ್ತಿರುವುದು ನಿತ್ಯ ಘಟನೆಯಾಗಿದೆ. ಅದೇ ರೀತಿ ಮನೆಗಳ ಮುಂಬಾಗದಲ್ಲಿರುವ ಚಪ್ಪಲಿಗಳನ್ನು ಕೂಡಾ ನಾಯಿಗಳು ಕಚ್ಚಿ ಹಾಳು ಮಾಡುವುದರ ಜೊತೆಯಾಗಿ ಎಲ್ಲೆಲ್ಲೋ ಕೊಂಡು ಹೋಗಿ ಹಾಕುತ್ತಿದೆ. ಬಂದ್ಯೋಡ್ ಅಡ್ಕ ರಸ್ತೆ ಬದಿಯಲ್ಲಿ ಮೇಯುತಿದ್ದ ಹಸುವಿನ ಕರುವನ್ನು ನಾಯಿ ಪಡೆಗಳು ಕಚ್ಚಿ ಕೊಂದು ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ. ಬಂದ್ಯೋಡು ಅಡ್ಕ, ಪ್ರತಾಪನಗರ, ಮಂಜೇಶ್ವರ ಸಹಿತ ವಿವಿಧ ಪ್ರದೇಷಗಳ ಒಳರಸ್ತೆಯಲ್ಲಿ ಬೀಡಿ ನಾಯಿಗಳ ಅಟ್ಟಹಾಸ ಮಿತಿ ಮೀರಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. [


Share with

Leave a Reply

Your email address will not be published. Required fields are marked *