ವಿವಿದ ಕಡೆಗಳಲ್ಲಿ ವ್ಯಾಪಕಗೊಂಡ ಬೀದಿ ನಾಯಿಗಳ ಕಾಟ: ಊರವರಲ್ಲಿ ಆತಂಕದಲ್ಲಿ

Share with

ಮಂಜೇಶ್ವರ : ಮಂಜೇಶ್ವರ, ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕದಲ್ಲಿದ್ದಾರೆ. ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡುವ ಭಯದಿಂದ, ಜನರು ತಮ್ಮ ಮನೆಗಳಿಂದ ಹೊರಗಿಳಿಯಲು ಹೆದರುತಿದ್ದಾರೆ.
ಇದರಿಂದಾಗಿ ವಿದ್ಯಾರ್ಥಿಗಳು ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ತೂಮಿನಾಡಿನಲ್ಲಿ ಕರ್ನಾಟಕದಿಂದ ದ್ವಿಚಕ್ರ ವಾಹನದಲ್ಲಿ ಬಂದ ಬ್ಯಾಂಕ್ ಪಿಗ್ಮಿ ಸಂಗ್ರಹಗಾರನ ಮೇಲೆ ಜನರ ಕಣ್ಣು ಮುಂದೆಯೇ ನಾಯಿ ಪಡೆಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ. ಬಳಿಕ ಸ್ಥಳೀಯರು ನಾಯಿಯಿಂದ ಬಿಡಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದೆ.
ಇದಕ್ಕಿಂತ ಮೊದಲು ಕೂಡಾ ಇದೇ ಪರಿಸರದಲ್ಲಿ ನಾಯಿ ಪಡೆಗಳು ಮದ್ರಸಕ್ಕೆ ಹೋಗುವ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ಬೀದಿ ನಾಯಿಗಳನ್ನು ನಿಯಂತ್ರಣ ಗೊಳಿಸಬೇಕಾದ ಸಂಬಂಧಪಟ್ಟವರು ಇತ್ತ ಕಡೆ ತಿರುಗಿಯೂ ನೋಡುವುದಿಲ್ಲವೆಂದು ಸ್ಥಳೀಯರು ಆರೋಪಿಸುತಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಹೆದ್ದಾರಿ ಸಹಿತ ಒಳರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ವಾಹನ ಸವಾರರನ್ನು , ಪಾದಚಾರಿಗಳನ್ನು ಬೆನ್ನಟ್ಟುವ ಕೃತ್ಯವೂ ನಡೆಸುತ್ತಿದೆ. ಸಂಬAಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *