ಸುಬ್ರಹ್ಮಣ್ಯ: ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯೊಬ್ಬರ ಮಗುವನ್ನು ಬೀದಿ ನಾಯಿಯೊಂದು ಹಾವಿನಿಂದ ರಕ್ಷಿಸಿದ ಘಟನೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆದಿದೆ.
ಆದಿ ಸುಬ್ರಹ್ಮಣ್ಯಕ್ಕೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಮಗುವನ್ನು ರಸ್ತೆಯಲ್ಲಿ ಬಿಟ್ಟು ಪಕ್ಕದ ಅಂಗಡಿಗೆ ಹಣ್ಣುಕಾಯಿ ಖರೀದಿ ಮಾಡಲು ತೆರಳಿದ್ದರು. ಈ ವೇಳೆ ಮಗುವು ರಸ್ತೆ ಬದಿಗೆ ಬಂದಿದೆ. ಇದೇ ಸಂದರ್ಭ ನಾಗರಹಾವೊಂದು ರಸ್ತೆ ದಾಟುತ್ತಿತ್ತು. ರಸ್ತೆ ಬದಿಗೆ ಬಂದಿದ್ದ ಮಗು ಹಾವನ್ನು ತುಳಿಯುವಷ್ಟರಲ್ಲಿ ಅಲ್ಲಿಯೇ ಮಲಗಿದ್ದ ಬೀದಿ ನಾಯಿ ಓಡಿ ಹೋಗಿ ಮಗುವಿಗೆ ಅಡ್ಡ ನಿಂತಿಗೆ. ಮಗುವು ಹಾವನ್ನು ತುಳಿಯದಂತೆ, ಹಾವು ರಸ್ತೆ ದಾಟಲು ಅವಕಾಶ ಮಾಡಿಕೊಟ್ಟು ಮಗುವನ್ನು ಪ್ರಾಣಾಪಾಯದಿಂದ ಕಾಪಾಡಿದೆ.
ಈ ಘಟನೆಯ ಪ್ರತ್ಯಕ್ಷದರ್ಶಿಗಳು ಇತರರಿಗೆ ತಿಳಿಸಿದ್ದು, ಘಟನೆ ಕುರಿತ ಬರಹ ಸಾಮಾಜಿಕ ಜಾಲಣದಲ್ಲಿ ವೈರಲ್ ಆಗಿದೆ.