ಮಹಿಳಾ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಬೀದಿ ನಾಟಕ ಕಾರ್ಯಕ್ರಮ

Share with

ಬಂಟ್ವಳ : ಶ್ರಿ ರಾಮ್ ಯಶಸ್ವಿ
ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಕರಾವಳಿ ಜಾನಪದ ಕಲಾ ತಂಡದಿಂದ
ಬೀದಿ ನಾಟಕ ಕಾರ್ಯಕ್ರಮವನ್ನು ಬಟ್ವಾಳ ತಾಲೂಕಿನ ಅಲ್ಲಿಪಾದೆ ಯಲ್ಲಿ ನಡೆಸಲಾಯಿತು. ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣರವರು ದೀಪ ಬೆಳಗಿಸಿ ಟಮ್ಕಿ ಬಾರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು . ಕರಾವಳಿ ಜಾನಪದ ಕಲಾ ತಂಡದವರಿಂದ ನೀರು ಮತ್ತು ನೈರ್ಮಲ್ಯದ ಬಗ್ಗೆ,ಕುಡಿಯುವ ನೀರಿನ ಮಹತ್ವ ಮತ್ತು ಸದ್ಬಳಕೆ ಬಗ್ಗೆ,ನೆಲ -ಜಲ, ಅಂತರ್ಜಲ ಹೆಚ್ಚಳ ಮತ್ತು ಮಳೆನೀರು ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ನೀರಿನ ಉಳಿಕೆ, ಮತ್ತು ಬಳಕೆಯ ಬಗ್ಗೆ,ದಿನೇ ದಿನೇ ನೀರಿನ ಸಮಸ್ಯೆ ಉಂಟಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುವ ಬಗ್ಗೆ ಬೀದಿನಾಟಕ ಪ್ರದರ್ಶನ ಮೂಲಕ ಜನರಿಗೆ ಅರಿವು ಮೂಡಿಸಿದ್ದರು. ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಕೇಂದ್ರ ಒಕ್ಕೂಟ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಅಲ್ಲಿಪಾದೇ ಪಂಚಾಯತ್ ಅಧ್ಯಕ್ಷ ಲೀಲಾವತಿ,ಅಲ್ಲಿಪಾದೇಒಕ್ಕೂಟ ಅಧ್ಯಕ್ಷ ನವೀನ್ ದೇವಸ್ಯ,ಪಡೋರ್ ಒಕ್ಕೂಟ ಅಧ್ಯಕ್ಷ ಗೀತಾ,ಜಾನಪದ ಕಲಾ ತಂಡದ ಗಿರೀಶ್ ನಾವಲೇ, ಒಕ್ಕೂಟ ಪದಾಧಿಕಾರಿಗಳು ಶ್ರೀರಾಮ ಭಜನಾ ಮಂಡಳಿ ಪದಾಧಿಕಾರಿಗಳು, ವಲಯದ ಮೇಲ್ಪೀಚಾರಕಿ ರೂಪ ರೈ ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರುತಿ ಸೇವಾ ಪ್ರತಿನಿಧಿ ವಸಂತಿ ವಿಜಯ ಹಾಗೂ ಕೇಂದ್ರದ ಎಲ್ಲಾ ಸದಸ್ಯರು.ಗ್ರಾಮಸ್ಥರು,,ಪ್ರಗತಿ ಬಂದು ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು


Share with

Leave a Reply

Your email address will not be published. Required fields are marked *