ಒಂದು ವೇಳೆ ಮತದಾನದ ದಿನದಂದು ಯಾವುದೇ ಸಂಸ್ಥೆ ಅಥವಾ ಮಾಲೀಕರು ನೌಕರರಿಗೆ ರಜೆ ನೀಡಲು ನಿರಾಕರಿಸಿದರೆ ಅಥವಾ ವೇತನ ಕಡಿತಗೊಳಿಸಿದರೆ ಅಂತಹವರ ವಿರುದ್ಧ ಜನಪ್ರತಿನಿಧಿ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಸಿದೆ.

ಈ ಆದೇಶದಿಂದಾಗಿ ನಿಮ್ಮ ಕ್ಷೇತ್ರದ ಮತದಾನದ ದಿನಾಂಕದಂದು ರಜೆ ಸೌಲಭ್ಯ ದೊರೆಯಲಿದೆ. ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬದಲ್ಲಿ ಪಾಲ್ಗೊಳ್ಳಲು ಮತ್ತು ನಿಮ್ಮ ಹಕ್ಕನ್ನು ಚಲಾಯಿಸಲು ಸಿದ್ಧರಾಗಿ. ತಪ್ಪದೇ
ಮತದಾನ ಮಾಡಿ.




