ಮಂಜೇಶ್ವರ : ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಮಂಜೇಶ್ವರದಲ್ಲಿ ಮಕ್ಕಳಿಗಾಗಿ ಇರುವ ಉದ್ಯಾನವನದ ನವೀಕರಿಸಬೇಕು, ಪೈವಳಿಕೆಯಲ್ಲಿ ನಡೆಯುವ ಬಾಲಸಂಘ ಜಿಲ್ಲಾ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಬಾಲಸಂಘ ಮಂಜೇಶ್ವರ ಏರಿಯಾ ಸಮ್ಮೇಳನ ಆಗ್ರಹಿಸಿದೆ.
ಹೊಸಂಗಡಿ ಕೆ.ಎಸ್.ಟಿ. ಎ ಭವನದಲ್ಲಿ ನಡೆದ ಸಮ್ಮೇಳನವನ್ನು ಬಾಲಸಂಘ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಪ್ರವಿಷಾ ಪ್ರಮೋದ್ ಉದ್ಘಾಟಿಸಿದರು. ಏರಿಯಾ ಸಮಿತಿ ಅಧ್ಯಕ್ಷೆ ಪದ್ಮಜಾ ಅಧ್ಯಕ್ಷತೆ ವಹಿಸಿದ್ದರು. ನಿಶಿತ್ ಕೋರಿಕ್ಕರ್ ಶ್ರದ್ಧಾಂಜಲಿ ಠರಾವು ಮಂಡಿಸಿದರು. ನಿಶಿತಾ ಶೆಟ್ಟಿ ಚಟುವಟಿಕೆ ವರದಿಯನ್ನು ಮಂಡಿಸಿದರು. ಬಾಲಸಂಘ ರಾಜ್ಯ ಸಮಿತಿ ಸದಸ್ಯೆ ಭಾರತಿ.ಎಸ್, ಜಿಲ್ಲಾ ಸಮಿತಿ ಸದಸ್ಯ ಆದರ್ಶ್ ಕಾರಡ್ಕ, ಪ್ರಶಾಂತ್ ಕನಿಲ ಅಭಿನಂದನಾ ಭಾಷಣ ಗೈದರು. ವಿನಯ್ ಕುಮಾರ್ ಬಾಯಾರು ಸ್ವಾಗತಿಸಿದರು. ಕರುಣಾಕರ ಶೆಟ್ಟಿ ವಂದಿಸಿದರು. ಅಧ್ಯಕ್ಷರಾಗಿ ನಿಶಿತ್ ಕೋರಿಕ್ಕಾರ್,ಕಾರ್ಯದರ್ಶಿಯಾಗಿ ನಿಶಿತಾ ಶೆಟ್ಟಿ,ಕನ್ವಿನರ್ ಆಗಿ ಭಾರತಿ.ಎಸ್, ಕೊ ಆರ್ಡಿನೆಟರ್ ಆಗಿ ಪದ್ಮಜಾ ಕೂಳೂರು ಎಂಬೀವರು ಒಳಗೊಂಡ 33 ಮಂದಿಯ ಸಮಿತಿ ಆಯ್ಕೆ ಮಾಡಲಾಯಿತು