ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗೆ  ಎದೆ ನೋವು: ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿದ ಚಾಲಕ, ನಿರ್ವಾಹಕ

Share with

ಮಂಗಳೂರು: ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು, ಬಸ್ಸಿನ ಚಾಲಕ ಹಾಗು ನಿರ್ವಾಹಕ ಬಸ್ಸನ್ನು ಆಂಬುಲೆನ್ಸ್ ಮಾದರಿಯಲ್ಲಿ ಚಲಾಯಿಸಿ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ.

ಕುಳೂರು ಮಾರ್ಗವಾಗಿ ಚಲಿಸುತ್ತಿದ್ದ 13ಎಫ್ ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಹಠಾತ್ತನೆ ಎದೆ ನೋವು ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಸ್ಸಿನ ಚಾಲಕ ಗಜೇಂದ್ರ ಕುಂದರ್ ಹಾಗೂ ನಿರ್ವಾಹಕ ಮಹೇಶ್ ಪೂಜಾರಿ ಸುರೇಶ್ ಎಂಬುವವರು ಎಲ್ಲಾ ಪ್ರಯಾಣಿಕರನ್ನು ಹೊತ್ತುಕೊಂಡು ಬಸ್ಸನ್ನು ಆಂಬುಲೆನ್ಸ್ ಮಾದರಿಯಲ್ಲಿ ಸೈರಾನ್ ಹಾಕಿಕೊಂಡು 6 ಕಿ.ಮೀ ದೂರವನ್ನು 6 ನಿಮಿಷಗಳಲ್ಲಿ ಕ್ರಮಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಚಾಲಕ ಹಾಗೂ ನಿರ್ವಾಹಕ ಆಸ್ಪತ್ರೆಯ ಆವರಣಕ್ಕೆ ಬಸ್ಸನ್ನು ಚಲಾಯಿಸಿ, ಸೂಕ್ತ ಸಮಯದಲ್ಲಿ ವಿದ್ಯಾರ್ಥಿಯನ್ನು ಕ್ಯಾಶುವಾಲಿಟಿ ವಾರ್ಡ್ ಗೆ ಸೇರಿಸಿದರು. ಚಾಲಕನ ಹಾಗೂ ನಿರ್ವಾಹಕನ ಸಮಯಪ್ರಜ್ಞೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Share with

Leave a Reply

Your email address will not be published. Required fields are marked *