ನೆಲಮಂಗಲ: ತಾಲೂಕಿನ ಟಿ.ಬೇಗೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆ ಮಾಡಿದ್ದ ಪ್ರೊಫೆಸರ್ ಡಾ.ಅಬ್ದುಲ್‌ಗೆ ವಿದ್ಯಾರ್ಥಿಗಳು ಥಳಿಸಿದ್ದ ಘಟನೆ ಬೆನ್ನಲ್ಲೇ ಕಾಲೇಜಿನ ಇ-ಮೇಲ್‌ಗೆ ಬೆದರಿಕೆ ಸಂದೇಶ ಬಂದಿದೆ.

ಡಾ. ಅಬ್ದುಲ್‌ನನ್ನು ಅವಮಾನಿಸಲಾಗಿದೆ. ನಿಮ್ಮ ಕಾಲೇಜಿಗೆ ಬಾಂಬ್ ಹಾಕಿ ಉಡಾಯಿಸುತ್ತೇವೆ ಎಂದು ಬೆದರಿಕೆ ಸಂದೇಶ ಕಳುಹಿಸಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುರುವಾರ ತಡರಾತ್ರಿ ಮೇಲ್‌ಗೆ ಅಪರಿಚಿತ ಮೇಲ್‌ನಿಂದ ಬೆದರಿಕೆ ಹಾಕಿದ್ದಾರೆ. ವಿದ್ಯಾರ್ಥಿಗಳು, ವೈದ್ಯರು ಆತಂಕದಿಂದ ಹೊರಗೆ ಬಂದಿದ್ದರು. ಪೊಲೀಸರು ಪರಿಶೀಲನೆ ಬಳಿಕ ಹುಸಿ ಬಾಂಬ್ ಸಂದೇಶ ಎಂಬುದು ಗೊತ್ತಾಗಿದೆ.




