ಬೆಂಗಳೂರು, ಅಕ್ಟೋಬರ್ 24: ಉತ್ತರಾಧಿಕಾರಿ ಬಗ್ಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ನಾನಾ ವಿಶ್ಲೇಷಣೆಯೂ ನಡೆಯುತ್ತಿದೆ. ಸದ್ಯ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದು, ಈ ಹೇಳಿಕೆ ಬಗ್ಗೆ ಎಂಎಲ್ಸಿ ಡಾ.ಯತೀಂದ್ರ ಬಳಿಯೇ ಕೇಳಿದೆ. ಅದು ಸೈದ್ಧಾಂತಿಕವಾಗಿ ಮಾತ್ರ ಅಂತ ಹೇಳಿದ್ದಾರೆ. ಇಂಥವರೇ ಸಿಎಂ ಆಗಬೇಕು ಎಂದು ಡಾ.ಯತೀಂದ್ರ ಹೇಳಿಲ್ಲ. ತಿರುಚಿ ಏನಾದ್ರೂ ಹೇಳಿದ್ದಾರಾ ಎಂದು ಡಾ.ಯತೀಂದ್ರಗೆ ಕೇಳಿದೆ. ಇಲ್ಲ, ನಾನು ಸೈದ್ಧಾಂತಿಕವಾಗಿ ಮಾತಾಡಿದ್ದು ಎಂದಿದ್ದಾರೆ ಎಂದರು.





