ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಭೆ ಮಾಡುತ್ತಿದ್ದರು. ಜನ ಸ್ಪಂದನೆ ಕಾರ್ಯಕ್ರಮದಲ್ಲಿ ಯಾರೋ ಒಬ್ಬ ವ್ಯಕ್ತಿ ಕೊಟ್ಟ ಮನವಿ ಪತ್ರ ಓದುತ್ತಿದ್ದಾಗ ಅವರ ಎಡಗೈ ಬೆರಳಿಗೆ ಗುಂಡು ಸೂಜಿ ಚುಚ್ಚಿತ್ತು. ಆಗ ಅಲ್ಲಿಯೇ ಕರ್ಚಿಫ್ ಸುತ್ತಿಕೊಂಡಿದ್ದ ಸಿದ್ದರಾಮಯ್ಯ ಹಾಗೆಯೇ ಸಭೆಗೆ ಬಂದಿದ್ದರು. ನಂತರ ವೈದ್ಯರಿಗೆ ಬರುವಂತೆ ಹೇಳಿದ್ದರು. ಮೀಟಿಂಗ್ ನಡೆಯುತ್ತಿರುವಾಗಲೇ ಅಲ್ಲಿಗೆ ಬಂದ ವೈದ್ಯರು ಚಿಕಿತ್ಸೆ ನೀಡಿದರು.